ಪರಿಸರದ ಉಳಿವಿಗಾಗಿ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುವುದು ಮುಖ್ಯ ಅನ್ನುವ ಉದ್ದೇಶವನ್ನಿಟ್ಟುಕೊಂಡು ಮೊಡಂಕಾಪು ರೋಟರಿ ಕ್ಲಬ್ಬಿನ ಪ್ರೆಸಿಡೆಂಟ್ ಇಲೆಕ್ಟ್ ಪ್ರೊಫೇಸರ್. ಡಾ. ಗೋವರ್ದಾನ್ ರಾವ್ ಅವರು ತನ್ನ ಮಗ ಪ್ರಜ್ವಲ್ ಕುಮಾರ್ ಜೊತೆಗೆ ಸತತ ಎರಡು ದಿನಗಳಿಂದ ಬಿ.ಸಿ. ರೋಡು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡು ಕೈಕಂಬದ ರಸ್ತೆ ವಿಭಾಜಕದಲ್ಲಿ ಬಗೆ ಬಗೆಯ ಹೂವಿನ ಗಿಡ ಹಾಗೂ ಅಲಂಕಾರಿಕ ಗಿಡಗಳನ್ನು ನೆಟ್ಟಿದ್ದಾರೆ.
ಇಂದು ರಸ್ತೆ ಅಗಲೀಕರಣದಿಂದಾಗಿ ಅದೆಷ್ಟೋ ಗಿಡಗಳು ಬಲಿಯಾಗಿವೆ ಆದರೇ ಅದರ ಬದಲಿಗೆ ಬೇರೆ ಗಿಡಗಳನ್ನು ಹಾಕುವ ಪ್ರಯತ್ನ ಯಾರೂ ಮಾಡಿಲ್ಲ. ಇಂತಹ ಗಿಡ ನೆಡುವ ಕಾರ್ಯಕ್ರಮಗಳು ಸರ್ಕಾರವೇ ಮಾಡಬೇಕೆಂದೇನು ಇಲ್ಲ. ಊರವರು ಸೇರಿ ಮಾಡಬಹುದು ಇಲ್ಲವೇ ತಂದೆ ಮಗ ಕೂಡಾ ಮಾಡಬಹುದು ಎಂಬುದನ್ನು ಪ್ರೊಫೇಸರ್ ತೋರಿಸಿಕೊಟ್ಟಿದ್ದಾರೆ. ಮಳೆಗಾಲದ ಸಮಯವೇ ಸರಿಯಾದ ಸಮಯ ಗಿಡಗಳನ್ನು ನೆಡಲು. ಹೀಗೇ ಗಿಡಗಳನ್ನು ನೆಡುವುದರಿಂದ ನಗರದ ಸೌನ್ದರ್ಯವು ಹೆಚ್ಚುವುದರೊಂದಿಗೆ ವಾತಾವರಣಕ್ಕೆ ಆಮ್ಲಜನಕದ ಪೂರೈಕೆಯಾಗುತ್ತದೆ. ಇವರು ತಮ್ಮ ಟೆರೇಸ್ನಲ್ಲೂ ಗಾರ್ಡನ್ ಮಾಡಿ ಮಾದರಿಯಾಗಿದ್ದಾರೆ. ಕೈಕಂಬ ದಿಂದ ಬಿ.ಸಿ ರೋಡ್ ಹಾಗೆಯೇ ಕೈಕಂಬದಿಂದ ಬ್ರಹ್ಮರಕೊಟ್ಲುವರೆಗೇ ಗಿಡಗಳನ್ನು ಹಾಕುವ ಯೋಜನೆಯನ್ನು ಇಟ್ಟುಕೊಂಡಿದ್ದಾರೆ. ಮಾತ್ರವಲ್ಲ ಎಲ್ಲಾ ಸರಕಾರಿ ಕಚೇರಿಗಳಾದ ಪೋಸ್ಟ್ ಅಫೀಸ್, ಬಸ್ಸು ನಿಲ್ದಾಣ, ಪೊಲೀಸ್ ಸ್ಟೇಷನ್, ರೈಲ್ವೇ ಸ್ಟೇಷನ್ಗಳಲ್ಲಿ ಗಿಡಗಳನ್ನು ನೆಡುವ ಅಥವಾ ಪಾಟ್ಗಲ್ಲಿ ನೆಟ್ಟು ಕೊಡುವ ಉದ್ಧೇಶವನ್ನಿಟ್ಟುಕೊಂಡಿದ್ದಾರೆ. ಇದರ ಸಲುವಾಗಿ ಅವರು ಸಾರ್ವಜನಿಕರಿಂದ ಸಹಾಯಹಸ್ತವನ್ನು ಬಯಸುತ್ತಾರೆ. ದಾನಿಗಳು ಗಿಡಗಳನ್ನು ಅಥವಾ ಪಾಟ್ಗಳನ್ನು ನೀಡಿದಲ್ಲಿ ಅವರ ಕೆಲಸ ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರಿಯಲು ಸಾಧ್ಯವಾಗಬಹುದು.