ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಹುಟ್ಟು ಹಬ್ಬವನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಗಿಡ ವಿತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಕೋವಿಡ್ ನಿಂದಾಗಿ ನಮ್ಮ ಎಲ್ಲಾ ಆಚರಣೆ ಗಳು ಸರಳ ರೀತಿಯಲ್ಲಿ ನಡೆಯುತ್ತಿದ್ದು, ಪಕೃತಿಯ ಮೂಲಕ ಸಿಗುತ್ತಿದ್ದ ಆಮ್ಲಜನಕವನ್ನು ದುಡ್ಡು ಕೊಟ್ಟು ಖರೀದಿಸುವ ಪರಿಸ್ಥಿತಿ ಬಂದಿದೆ.
ಈಗಾಗಿ ಪ್ರಸ್ತುತ ದಿನಗಳಲ್ಲಿ ಹೆಚ್ಚು ಹೆಚ್ಚು ಗಿಡ ನೆಡುವ ಸಂಪ್ರದಾಯ ವನ್ನು ಬೆಳೆಸಿಕೊಂಡು ಆದರ ಪೋಷಣೆಯ ಜವಬ್ದಾರಿ ಯನ್ನು ಹೊರಬೇಕು ಎಂದು ತಿಳಿಸಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದಿರುವ ಶಾಸಕರು ಇನ್ನಷ್ಟು ವರ್ಷ ಗಳ ಕಾಲ ಕ್ಷೇತ್ರದ ಶಾಸಕರಾಗಿ ಮುಂದುವರಿಯಲು ದೇವರು ಅವರಿಗೆ ಶಕ್ತಿಯನ್ನು ಕರುಣಿಸಲಿ ಎಂದು ಆಶಿಸಿದರು.
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಿ, ಪಕ್ಷದ ಕಾರ್ಯಕರ್ತರು ಹೂಗುಚ್ಚ ನೀಡಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು.
ಕಾರ್ಯಕ್ರಮ ದಲ್ಲಿ ಪಕ್ಷದ ಸಾಮಾಜಿಕ ಜಾಲತಾಣವಿಭಾಗಕ್ಕೆ ಡ್ರೋನ್ ಕ್ಯಾಮರಾ ವನ್ನು ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡಿದರು.
ವಿಶ್ವಹಿಂದೂಪರಿತ್ ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಶಾಸಕರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಲಾಯಿತು.
ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಕ್ಷೇತ್ರ ಕೋಶಾಧಿಕಾರಿ ಪ್ರಕಾಶ್ ಅಂಚನ್, ಕಾರ್ಯದರ್ಶಿ ರಮನಾಥ ರಾಯಿ,ಪುರಸಭಾ ಸದಸ್ಯರಾದ ಹರಿಪ್ರಸಾದ್, ಮೀನಾಕ್ಷಿ ಜಿ.ಗೌಡ, ದೇವಕಿಶಿವಪ್ಪ ಪೂಜಾರಿ, ಶಶಿಕಲಾಬಿ,ವಿದ್ಯಾವತಿಪ್ರಮೋದ್ ಕುಮಾರ್, ಚೈತನ್ಯ ಗಣೇಶ್ ದಾಸ್, ಜಯಂತಿ, ಪ್ರಮುಖರಾದ ಲೋಕನಾಥ ಶೆಟ್ಟಿ, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಕೇಶವ ದೈಪಲ, ಚರಣ್ ಜುಮಾದಿಗುಡ್ಡೆ, ಡಾ! ಬಾಲಕೃಷ್ಣ ಕುಮಾರ್, ಜನಾರ್ಧನ ಕುಲಾಲ್ , ಲಕ್ಣಣ್ ರಾಜ್,ಪ್ರಣಾಮ್ ರಾಜ್, ಮಹೇಶ್ ಶೆಟ್ಟಿ, ಮಚ್ಚೇಂದ್ರ ಸಾಲ್ಯಾನ್, ವಿಶ್ವನಾಥ ಚೆಂಡ್ತಿಮಾರ್, ರಮನಾಥ ಪೈ, ಗುರುದತ್ತನಾಯಕ್, ಸುರೇಶ್ ಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.