ಬಂಟ್ವಾಳ: ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರೊಂದು ಹಿಟಾಚಿ ಸಹಿತ ಮನೆಯ ಮೇಲೆ ಬಿದ್ದು ಟಿಪ್ಪರ್ ನಲ್ಲಿದ್ದ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ಅಮ್ಟಾಡಿಯ ಕೆಂಪುಗುಡ್ಡೆ ಕ್ರಾಸ್ ಬಳಿ ನಡೆದಿದೆ.
ಟಿಪ್ಪರ್ ನಲ್ಲಿದ್ದ ವಿಠಲ್ ಅವರು ಗಾಯಗೊಂಡು ಅಡಿಗೆ ಸಿಲುಕಿದ್ದು, ಬಿ.ಸಿ.ರೋಡಿನ ವಿಜಯಲಕ್ಷ್ಮಿ ಕ್ರೇನ್ ತಕ್ಷಣ ಸ್ಥಳಕ್ಕೆ ತೆರಳಿ ಟಿಪ್ಪರನ್ನು ಮೇಲಕ್ಕೆತ್ತಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯಲ್ಲಿ ನಾರಾಯಣ ಭಂಡಾರಿ ಅವರ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆ ಮಂದಿಗೆ ಹಾನಿಯಾಗಿಲ್ಲ. ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.