ಬಂಟ್ವಾಳ: ಪಾಣೆಮಂಗಳೂರು ಹೊಸ ಸೇತುವೆ ಯಲ್ಲಿ ಮಧ್ಯ ರಾತ್ರಿ ಬೈಕ್ ಚಾಲನೆಯಲ್ಲಿಟ್ಟು ಬೈಕ್ ಸವಾರ ನಾಪತ್ತೆಯಾಗಿರುವ ಘಟನೆ ನಡೆದಿದ್ದು , ಸಧ್ಯ ಬೈಕ್ ಪೋಲೀಸರ ವಶದಲ್ಲಿದ್ದು, ಸವಾರ ನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬೆಂಗಳೂರು ಮೂಲದ ವ್ಯಕ್ತಿಯೋರ್ವ ಪಾಣೆಮಂಗಳೂರು ಸೇತುವೆಯ ಬೈಕನ್ನು ನಿಲ್ಲಿಸಿ ನಾಪತ್ತೆಯಾದ ಘಟನೆ ಬುಧವಾರ ನಡೆದಿದ್ದು, ನದಿಗೆ ಹಾರಿರುವ ಸಂಶಯ ವ್ಯಕ್ತವಾಗಿದೆ.

ಮೂಲತ: ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು(29) ನಾಪತ್ತೆಯಾದ ಯುವಕ.

ಬೆಂಗಳೂರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಎಂದು ಪೋಲೀಸರಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

 *ಆತ್ಮಹತ್ಯೆ ಗೆ ಪ್ರಯತ್ನಿಸಿ ವಿಫಲನಾಗಿದ್ದ ಸತ್ಯವೇಲು*

ಈತ ಸುಮಾರು 15 ದಿನಗಳ ಹಿಂದೆ ಇದೇ ರೀತಿ ನದಿಗೆ ಹಾಕುವುದಕ್ಕೆ ಬೆಂಗಳೂರಿನಿಂದ ಪಾಣೆಮಂಗಳೂರಿಗೆ ಆಗಮಿಸಿದ್ದ. ಆದರೆ ಸ್ಥಳೀಯರು ಆತನನ್ನು ರಕ್ಷಿಸಿ ದ್ದು, ಬಳಿಕ ಬಂಟ್ವಾಳ ನಗರ ಪೊಲೀಸರು ಆತನ ಪೋಷಕರನ್ನು ಕರೆಸಿ ಕಳುಹಿಸಿಕೊಟ್ಟಿದ್ದರು.

ಆತನ‌ ಬೈಕ್ ಬುಧವಾರ ಮುಂಜಾನೆ ೪.೩೦ ಸುಮಾರಿಗೆ ಪಾಣೆಮಂಗಳೂರು ಸೇತುವೆಯ ಮೇಲೆ ಮತ್ತೆ ಪ್ರತ್ಯಕ್ಷವಾಗಿದ್ದು, ಈ ಬಗ್ಗೆ ಸ್ಥಳೀಯ ರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೈಕ್ ಸ್ಟಾರ್ಟ್ ನಲ್ಲೇ ಇತ್ತು ಎನ್ನಲಾಗಿದೆ. ಬಳಿಕ ಎ.ಎಸ್.ಐ ದೇವಪ್ಪ ಹಾಗೂ ಎಚ್‌ಸಿ. ಸುರೇಶ ಪಡಾರ್ ಮಾಹಿತಿ ಪಡೆದು ಬೈಕನ್ನು ಠಾಣೆಗೆ ತಂದಿದ್ದಾರೆ.

ಜು. ೧೭ರಂದು ತಾಯಿಯಿಂದ ಪೆಟ್ರೋಲ್ ಹಾಕುವುದಕ್ಕೆ ೨೦೦ ರೂ. ಪಡೆದು ಕೆಲಸಕ್ಕೆಂದು ತೆರಳಿದ್ದನು. ಆದರೆ ಕೆಲಸಕ್ಕೆ ಹೋಗದೇ ಇದ್ದು, ರಾತ್ರಿ‌ ೧೧ರ ಸುಮಾರಿಗೆ ತಾಯಿಗೆ ಕರೆ ಮಾಡಿ ಸ್ನೇಹಿತನ ಮನೆಯಲ್ಲಿರುವುದಾಗಿ‌ ತಿಳಿಸಿದ್ದಾನೆ.

ಆತ ಮೊಬೈಲ್ ಆನ್ಲೈನ್ ಗೇಮ್ ಮೂಲಕ ಸಾಕಷ್ಟು ಹಣ ಕಳೆದುಕೊಂಡಿದ್ದು, ಹೀಗಾಗಿ ಆತ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತನ ನಾಪತ್ತೆಯ ಕುರಿತು ಬೆಂಗಳೂರಿನ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ. ‌

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here