ಪುದು ವಲಯ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯ ಇಂಟಕ್ ಉಪಾಧ್ಯಕ್ಷರಾಗಿದ್ದ ದಿವಂಗತ ಡಾಕ್ಟರ್. ಅಮೀರ್ ತುಂಬೆ ಅವರ ಸಂತಾಪಸೂಚಕ ಸಭೆಯನ್ನು ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ಕಂಪ್ಲೇಟ್ ನಲ್ಲಿ ಬುಧವಾರ ದಿನಾಂಕ 28.07. 2021 ರಂದು ಸಂಜೆ 4.30 ಕ್ಕೆ ಪುದು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಫೀಕ್ ಪೆರಿಯಾರ್ ರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಕೆಪಿಸಿಸಿ ಸಂಯೋಜಕರಾದ ಉಮರ್ ಫಾರೂಕ್ ಪರಂಗಿಪೇಟೆ ಅವರು ಮಾತನಾಡುತ್ತಾ ಹುಟ್ಟು ಆಕಸ್ಮಿಕ ಸಾವು ಖಚಿತ ಈ ಮಧ್ಯೆ ಮೂರು ದಿನದ ಜೀವನದಲ್ಲಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಂತಹ ದೀನದಲಿತರ ಸಂಕಷ್ಟಕ್ಕೆ ಆಸರೆಯಾಗಿದ್ದ ಅಂತಹ ಮರ್ಹೋಂ ಡಾಕ್ಟರ್ ಅಮೀರ್ ಅಹ್ಮದ್ ತುಂಬೆ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದ್ರಿ ದೇವರಲ್ಲಿ ಪ್ರಾರ್ಥಿಸಿದರು. ನಂತರ ಈ ಬಗ್ಗೆ ಪಂಚಾಯತ್ ಉಪಾಧ್ಯಕ್ಷರಾದ ಲಿಡಿಯೋ ಪಿಂಟೋ, ಪಂಚಾಯತ್ ಸದಸ್ಯರುಗಳಾದ ಭಾಸ್ಕರ ರೈ, ಹುಸೇನ್ ಪಾಡಿ, ಹಿರಿಯ ಕಾಂಗ್ರೆಸ್ಸಿಗ ರಾದ ಎಫ್. ಎ. ಖಾದರ್, ಅಮ್ಮೆಮಾರ್ ಜುಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಉಮರಬ್ಬ, ಪಂಚಾಯತ್ ಸದಸ್ಯರಾದ ಕಿಶೋರ್ ಮಾತನಾಡಿದರು. ಕೊನೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ರಮ್ಜಾನ್ ಮಾರಿಪಳ್ಳ ಮಾತನಾಡುತ್ತಾ ದಿವಂಗತ ಅಮೀರ್ ತುಂಬೆ ಯವರ ಪರಲೋಕ ಜೀವನವು ವಿಜಯ ಗಳಿಸಲಿ ಎಂದು ಪ್ರಾರ್ಥಿಸಿದರು.
ಸಭೆಯಲ್ಲಿ ಮುಡಿಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಜನಬ್ ಇಂತಿಯಾಜ್ ತುಂಬೆ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ನವಾಜ್ ನರಿಂಗಣ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮಜೀದ್ ಪೇರಿಮಾರ್, ಪುದು ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಿಜಾಂ ಕುಂಜಾತಕಲಾ, ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿಯಾದ ಹಕೀಮ್ ಮಾರಿಪಳ್ಳ, ಪಂಚಾಯತ್ ಮಾಜಿ ಅಧ್ಯಕ್ಷರಾದ ಆತಿಕ ಅಮ್ಮೆಮಾರ್, ಮಾಜಿ ಪಂಚಾಯಸದಸ್ಯರುಗಳಾದ ಎಸ್ ಹಸನಬ್ಬ, ಎಂಕೆ ಕಾದರ್, ಯುವ ಮುಖಂಡರಾದ ಹಿಶಾಮ್ ಪರಂಗಿಪೇಟೆ, ಪಂಚಾಯತ್ ಸದಸ್ಯರುಗಳಾದ ಇಕ್ಬಾಲ್ ಸುಜೀರ್, ಲವೀನಾ, ಜಹೀರ್, ರಿಯಾಜ್, ಫೈಝಲ್ ಅಮ್ಮೆಮಾರ್,ಮೊಹಮ್ಮದ್ ಮೋನು,ರಝಕ್ ಅಮ್ಮೆಮಾರ್, ರಶೀದಾ ಬಾನು, ಜೀನತ್, ರಜಿಯಾ, ಹಾಗೂ ಕಾಂಗ್ರೆಸ್ ಮುಖಂಡರಾದ ಗಫೂರ್ ಪರಂಗಿಪೇಟೆ, ಸಲೀಂ ಪರಂಗಿಪೇಟೆ, ಬಾಪಿ ಪರಂಗಿಪೇಟೆ, ಇನ್ಸದ್ ಮಾರಿಪಳ್ಳ, ಬಶೀರ್ ತಂಡೆಲ್, ಸದಾಶಿವ ಕುಮ್ದೇಲ್, ಸಲಾಂ ಮಲ್ಲಿ,ಸಮೀಜ್ ಪರಂಗಿಪೇಟೆ, ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.