ಬಂಟ್ವಾಳ ಹಿಟ್ ಎಂಡ್ ರನ್ ನಲ್ಲಿ ಬೈಕ್ ಸವಾರ ಗಂಭೀರ.
ಅಪಘಾತದ ದೃಶ್ಯ ಸಿ.ಸಿ.ಟಿ.ವಿ.ಯಲ್ಲಿ ಸೆರೆ
ಬಂಟ್ವಾಳ ತಾಲೂಕಿನ ಕುದ್ರೆಬೆಟ್ಟು ನಲ್ಲಿ ಬೈಕ್ ಸವಾರನೊರ್ವನಿಗೆ ಲಾರಿ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.ನೇತ್ರತ್ವದಲ್ಲಿ ಪೋಲೀಸರ ತಂಡದಿಂದ ಕ್ಪಿಪ್ರ ಕಾರ್ಯಾಚರಣೆಯಿಂದ ಲಾರಿ ಚಾಲಕ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಮಂಗಳೂರು ತಾಲೂಕಿನ ಹರೇಕಳ ಪಾವೂರು ನಿವಾಸಿ ಮಹಮ್ಮದ್ ತೌಶೀಪ್ ಗಾಯಗೊಂಡ ಯುವಕ.
ಗಂಭೀರವಾಗಿ ಗಾಯಗೊಂಡ ಯುವಕ ಮಂಗಳೂರು ಖಾಸಗಿ ಆಸ್ಪತ್ರೆಯ ಲ್ಲಿ ದಾಖಲು ಮಾಡಲಾಗಿದೆ.
ಬಂಟ್ವಾಳ ತಾಲೂಕಿನ ಕುದ್ರೆಬೆಟ್ಟು ಎಂಬಲ್ಲಿ
ಸವಾರನೋರ್ವನಿಗೆ ಹಿಂಬದಿಯಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿಹೊಡೆದು ಪರಾರಿಯಾಗಿತ್ತು.
ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಲಾರಿಯ ಸಂಖ್ಯೆ ಯನ್ನು ಸ್ಥಳೀಯ ರು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಎಸ್.ಐ. ನೇತ್ರತ್ವದ ತಂಡ ಕಾರ್ಯ ಚರಣೆ ನಡೆಸಿ ಬಿಸಿರೋಡಿನ ಸರ್ಕಲ್ ಬಳಿ ಲಾರಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿ.ಸಿ.ಟಿ.ವಿ.ಯಲ್ಲಿ ಅಪಘಾತದ ದೃಶ್ಯ ದಾಖಲಾಗಿದೆ.