ಬಂಟ್ವಾಳ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ 14 ಕೋಟಿ ಅನುದಾನದಲ್ಲಿ ಡಾಮರೀಕರಣಗೊಂಡ ಗೊಳ್ತಮಜಲು-ಮಂಚಿಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ 75ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಸಾಲುಮರ ಬೆಳೆಸುವ ಅಭಿಯಾನ ನಡೆಯುತ್ತಿದ್ದು,
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಗಿಡ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ,ಗೋಳ್ತಮಜಲು ಗ್ರಾ.ಪಂ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ವೀರಕಂಭ ಗ್ರಾ.ಪಂ ಸದಸ್ಯರಾದ ದಿನೇಶ್ ಪೂಜಾರಿ,PMGSY ಇಂಜಿನಿಯರ್ ಪ್ರಸನ್ನ,ಗುತ್ತಿಗೆದಾರ ಪ್ರೇಮನಾಥ,ಸಾಮಾಜಿಕ ಅರಣ್ಯ ಇಲಾಖೆಯ ರವಿಕುಮಾರ್,ಬಿಜೆಪಿ ಬಂಟ್ವಾಳ ಕಾರ್ಯದರ್ಶಿ ಗಣೇಶ್ ರೈ ಮಾಣಿ ಉಪಸ್ಥಿತರಿದ್ದರು.