ಮಂಗಳೂರು :ಅಕ್ರಮವಾಗಿ ಮರಮುಟ್ಟುಗಳನ್ನು ಸಾಗಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಆರಣ್ಯ ಇಲಾಖೆಯ ವರು ಆರೋಪಿ ಸಹಿತ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಆರೋಪಿ ಚಾಲಕನಾದ ಬೆಳ್ತಂಗಡಿ ತಾಲೂಕು ಮೂಡಕೊಡಿ ಗ್ರಾಮದ ಇಸಾಕ್ ಮೊಹಮದ್ ನ ಮೇಲೆ ಪ್ರಕರಣ ದಾಖಲಿಸಿಕೊಂಡು ಸೊತ್ತು ಮತ್ತು ವಾಹನವನ್ನು ಸರ್ಕಾರದ ಪರವಾಗಿ ಅಮಾನತು ಮಾಡಿ ಕೊಳ್ಳಲಾಗಿದೆ.
ವಾಹನ ಮತ್ತು ಅಮಾನತು ಪಡಿಸಿದ ಸೊತ್ತಿನ ಸಮೇತ ಮೌಲ್ಯ ಒಟ್ಟು 3ಲಕ್ಷ ಆಗಿದೆ.
ಜೂನ್. 1 ರಂದು ಮುಂಜಾನೆ ಮಂಗಳೂರು ತಾಲೂಕು ಅಲಪೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 73ರ ಪಡಿಲು ಜಂಕ್ಷನ್ ಎಂಬಲ್ಲಿಅಕ್ರಮವಾಗಿ ರಹದಾರಿ ರಹಿತ ಕಿರಾಲ್ಬೋಗಿ ಜಾತಿಯ ಕಟ್ಟಿಗೆಯನ್ನುಸಾಗಾಟ ಮಾಡುವ ಮಾಹಿತಿ ಮೇರೆ ಗೆ ಮಂಗಳೂರು ವಲಯ ಅರಣ್ಯಾಧಕಾರಿಯರು ಪತ್ತೆ ಕಾರ್ಯ ನಡೆಸಿದ್ದಾರೆ.
ಪ್ರಕರಣದ ಮುಂದಿನ ತನಿಖೆಯನ್ನು ಡಿಸಿಎಫ್ ಕರಿಕಳನ್ ಮತ್ತು ಎಸಿಎಫ್ ಸುಬ್ರಮಣ್ಯ ರಾವ್ ಇವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಶ್ರೀಧರ್ ಪೀ ನಡೆಸುತಿದ್ದಾರೆ.
ಮಂಗಳೂರು ವಲಯ ಅರಣ್ಯಾಧಕಾರಿ ಶೀರ್ಧರ್ ಪಿ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಗಳಾದ ಕೃಷ್ಣ , ವಿನಯ್ ಕುಮಾರ್, ಮೋಹನ್, ಸೋಮನ ಗೌಡ ಪಾಟೀಲ್ ಹಾಗೂ ಚಾಲಕ ಸುನಿಲ್ ಬಿ ಸಿ ಕಾರ್ಯಾಚರಣೆಯಲ್ಲಿದ್ದರು.