ಬಂಟ್ವಾಳ ತಾಲೂಕಿನ ವಾಮದಪದವು ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಸುಮಾರು 1 ಕೊಟಿ ವೆಚ್ಚದಲ್ಲಿ ಸಿ.ಎಸ್.ಆರ್ ಪಂಡ್ ಹಾಗೂ ಬಂಟ್ವಾಳ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸಿದ್ದವಾಗುತ್ತಿದ್ದ ಆಕ್ಸಿಜನ್ ಘಟಕದ ಕಾಮಗಾರಿ ಪೂರ್ಣಗೊಂಡಿದ್ದು ಜೂನ್.5( ನಾಳೆ )ರಂದು ಬೆಳಿಗ್ಗೆ 10 ಗಂಟೆ ಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರ ನೇತ್ರತ್ವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು , ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿ ಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಉಂಟಾದ ಆಕ್ಸಿಜನ್ ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲೆಯಲ್ಲಿ ಆಕ್ಸಿಜನ್ ಘಟಕ ನಿರ್ಮಾಣ ಕಾರ್ಯಕ್ಕೆ ಸರಕಾರ ಮುಂದಾಗಿತ್ತು.
ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಪೂರ್ವತಯಾರಿ ಮಾಡಿದ ಪ್ರಯತ್ನವಾಗಿ ಪ್ರಥಮಆಕ್ಸಿಜನ್ ಘಟಕ ಬಂಟ್ವಾಳ ತಾಲೂಕಿ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಮಾಗೊಂಡಿದೆ.
ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಅವರ ವಿಶೇಷ ಮುತುವರ್ಜಿಯಿಂದ ಜಿಲ್ಲೆಯಲ್ಲಿ ಪ್ರಥಮವಾಗಿ ಆತ್ಯಂತ ವೇಗವಾಗಿ ಕಾಮಗಾರಿ ಪೂರ್ಣಗೊಂಡ ಏಕೈಕ ಆಕ್ಸಿಜನ್ ಕೇಂದ್ರ ವಾಮದಪದವು ಸಮುದಾಯ ಆರೋಗ್ಯ ಕೇಂದ್ರಲ್ಲಿ ನಿರ್ಮಾಣವಾದ ಆಕ್ಸಿಜನ್ ಘಟಕವಾಗಿದೆ.
500 ಲೀ ಸಾಮಾರ್ಥ್ಯ ದ ಘಟಕವಾಗಿದ್ದು ,
ಒಂದು ನಿಮಿಷ ಕ್ಕೆ 47 ಲೀಟರ್ (l.p.m) ಆಕ್ಸಿಜನ್ ಉತ್ಪಾದನೆ ಮಾಡುವ ಘಟಕ ನಾಳೆ ಲೋಕಾರ್ಪಣೆಗೊಂಡು ಸಾರ್ವಜನಿಕ ಉಪಯೋಗಕ್ಕೆ ಸಿಗಲಿದೆ.
ಕೇವಲ 12 ದಿನಗಳಲ್ಲಿ ಸುಸಜ್ಜಿತ ಕಟ್ಟಡ ಸಹಿತ ಸಂಪೂರ್ಣ ವ್ಯವಸ್ಥೆ ಗಳ ಜೊತೆಯಲ್ಲಿ ಆಕ್ಸಿಜನ್ ಘಟಕ ಉದ್ಘಾಟನೆಗೆ ಸಿದ್ದವಾಗಿರುವುದು ತಾಲೂಕಿನ ಜನರ ಆರೋಗ್ಯದ ಭಾಗ್ಯ ಎಂಬಂತಾಗಿದೆ.
ಇದೇ ರೀತಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕದ ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲೇ ಉದ್ಘಾಟನೆ ನಡೆಯಲಿದೆ .
ಕೋವಿಡ್ ನಿಯಂತ್ರಣಕ್ಕಾಗಿ ಬಂಟ್ವಾಳ ಶಾಸಕರ ನಡೆ ಪ್ರತಿ ಗ್ರಾಮದ ಕಡೆ ಎಂಬಂತೆ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತ್ ಗೂ ಅಧಿಕಾರಿಗಳ ಜೊತೆ ತೆರಳಿ
ಟಾಸ್ಕ್ ಫೋರ್ಸ್ ಸಭೆ ಸಹಿತ ಪ್ರತಿ ಸಮಸ್ಯೆ ಗಳಿಗೆ ನೀಡಿದ ಸ್ಪಂದನೆ ಹಾಗೂ
ತಾಲೂಕು ತಹಶಿಲ್ದಾರ್ ರಶ್ಮಿ ಎಸ್‌ಅರ್.ಅವರ ನೇತ್ರತ್ವದ ತಾಲೂಕಿನ ಅಧಿಕಾರಿಗಳು ಗ್ರಾಮ ಪಂಚಾಯತ್ ನ ಟಾಸ್ಕ್ ಫೋರ್ಸ್ ಸದಸ್ಯರು ನೀಡಿದ ಸಹಕಾರ ಮತ್ತು ಸ್ಪಂದನೆಯ
ಪರಿಣಾಮವಾಗಿ ಬಂಟ್ವಾಳ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂಬುದು ಸಂತಸದ ವಿಚಾರ.