ಬಂಟ್ವಾಳ: ತುಳು ಭಾಷೆಯ ಬಗ್ಗೆ ನಡೆಯುವ ಟ್ವಿಟರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕುತಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಟ್ವಿಟರ್ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ತುಳು ರಾಜ್ಯದ ಅಧಿಕೃತ ಭಾಷೆಯಾಗಬೇಕು ಮತ್ತು ಸಂವಿಧಾನದ 8. ನೇ ಪರಿಚ್ಚೇದಕ್ಕೆ ಸೇರಬೇಕು ಎಂಬುದು ನಮ್ಮೆಲರ ಇಚ್ಚೆಯಾಗಿದೆ.
ಅಸಂಖ್ಯಾತ ತುಳುವ ಬಂಧುಗಳು , ತುಳು ಪ್ರೇಮಿಗಳು ನಡೆಸುತ್ತಿರುವ ಟ್ವಿಟರ್ ಅಭಿಯಾನಕ್ಕೆ ನಾನು ಧ್ವನಿಯಾಗುತ್ತೇನೆ ಎಂಬ ಟ್ವಿಟರ್ ಮಾಡಿದ್ದಾರೆ.
ನಮ್ಮ ಪೆರ್ಮೆದ ಬಾಸೆಗ್ ಮಾನಾದಿಗೆ ಅಯಿನಾತ್ ಬೇಗ ತಿಕ್ಕಡ್ ಪಂದ್ ಎನ್ನ ಪ್ರಾರ್ಥನೆ ಎಂದು ತುಳುವಿನಲ್ಲಿ ಟ್ವಿಟರ್ ಮಾಡಿ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.