ಬಂಟ್ವಾಳ: ಟ್ಯಾಂಕರ್ ಅಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ನಡೆದ ಅಪಘಾತದಲ್ಲಿ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಜೆ ವೇಳೆ ಗೆ ನಡೆದಿದೆ.
ಮಡಿಕೇರಿ ಕಡೆಯಿಂದ ಮಂಗಳೂರು ಆಸ್ಪತ್ರೆಗೆ ರೋಗಿಯನ್ನು ಕರೆತರುತ್ತಿದ್ದ ಅಂಬ್ಯುಲೆನ್ಸ್ ಹಾಗೂ ಟ್ಯಾಂಕರ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಯಾಗಿದೆ.
ಅಂಬ್ಯುಲೆನ್ಸ್ ನಲ್ಲಿದ್ದ ನಾಲ್ವರಿಗೂ ಗಾಯಗಳಾಗಿದ್ದು ಓರ್ವ ನಿಗೆ ಗಂಭೀರ ಗಾಯವಾಗಿದೆ. ಆದರೆ ಅಂಬ್ಯುಲೆನ್ಸ್ ವಾಹನದಲ್ಲಿದ್ದ ಯಾರಿಗೆ ಗಾಯವಾಗಿದೆ ಎಂಬ ಮಾಹಿತಿ ಸಿಕ್ಕಿಲ್ಲ.
ಬೈಕ್ ಸವಾರ ನಿಗೂ ಗಾಯವಾಗಿದ್ದು ಆತನ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.
ಗಾಯಗೊಂಡವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.