ಬೆಂಗಳೂರು: ಎಸ್.ಎಸ್.ಎಲ್.ಸಿ.ಪರೀಕ್ಷೆ ನಡೆಯುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಜುಲೈ 3 ನೇ ವಾರದಲ್ಲಿ ಎಸ್. ಎಸ್.ಎಲ್.ಸಿ.ಪರೀಕ್ಷೆ ನಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಐಚ್ಚಿಕ ಭಾಷೆ ಗಳಿಗೆ ಒಂದೇ ಪೇಪರ್ ಮೂಲಕ ಪರೀಕ್ಷೆ ನಡೆಯುತ್ತದೆ.
ವಿಜ್ಞಾನ, ಗಣಿತ ಸಮಾಜ ಪರೀಕ್ಷೆ ನಡೆಯುತ್ತದೆ , ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ತಯಾರಿ ಮಾಡಲಾಗುತ್ತಿದೆ.
ಗ್ರೇಡಿಂಗ್ ಆಧಾರದಲ್ಲಿ ಎಸ್.ಎಸ್. ಎಲ್.ಸಿ.ಫಲಿತಾಂಶ ನಡೆಯುತ್ತವೆ.
ಆದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಯಾರನ್ನು ಫೇಲ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಮಾರು 6000 ಸಾವಿರ ಕೇಂದ್ರ ಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ, ಒಂದೊಮ್ಮೆ ಕೊರೊನಾ ಸೊಂಕಿನಿಂದ ಪರೀಕ್ಷೆ ಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಕೆಲವೇ ದಿನಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.