ಬಂಟ್ವಾಳ: ಲಕ್ಷದ್ವೀಪದ ಜನತೆಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಮೇ 31 ಸಂಜೆ 7:00 ಗಂಟೆಗೆ SKSSF ಮಿತ್ತಬೈಲ್ ಕ್ಲಸ್ಟರ್ ನಲ್ಲಿ ಹಾಗೂ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಖಾ ಮಟ್ಟದಲ್ಲಿ ಪೋಸ್ಟರ್ ಪ್ರದರ್ಶನ ಮಾಡಲಾಯಿತು.
ಶಾಂತಿಯುತವಾಗಿ ಬದುಕು ನಡೆಸುತ್ತಿದ್ದವರ ನಡುವೆ ಕರಾಳ ಕಾನೂನು ಜರುಗಿಸಿದ ಕೇಂದ್ರ ಸರ್ಕಾರವು ನಿಯಮ ಹಿಂಪಡೆಯಲಿ.
98 ರಷ್ಟು ಮುಸ್ಲಿಂ ಬಾಹುಳ್ಯವಿರುವ ಸುಮಾರು 38 ರಷ್ಟು ದ್ವೀಪಗಳಿದ್ದು ಕೇವಲ 10 ದ್ವೀಪಗಳಲ್ಲಿ ಜನವಾಸವಿರುವ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾಗಿದ್ದ ಮರ್ಹೂಂ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ರವರ ತವರು ಮಣ್ಣು ಲಕ್ಷದ್ವೀಪವು ಇಂದು ಕೇಂದ್ರ ಸರ್ಕಾರದ ಕರಾಳ ಕಾನೂನಿನಿಂದ ತನ್ನ ವೈವಿಧ್ಯತೆಯನ್ನು ಕಳೆದುಕೊಳ್ಳುತ್ತಿದೆ.
ದಿಯು ದಾಮುನ್ ಪ್ರದೇಶದ ಆಡಳಿತಾಧಿಕಾರಿಯಾಗಿದ್ದ ಪ್ರಪುಲ್ ಖೋಡಾ ಪಟೇಲರನ್ನು ಲಕ್ಷದ್ವೀಪದ ನೂತನ ಆಡಳಿತಾಧಿಕಾರಿಯಾಗಿ ನೇಮಿಸಿ ಅಭಿವೃದ್ದಿಯ ಹೆಸರಿನಲ್ಲಿ ಫ್ಯಾಶಿಸಂನ ಕರಾಳ ನೀತಿಯನ್ನು ದಿನಗೂಲಿಯಲ್ಲಿ ಬದುಕುತ್ತಿರುವ ಜನರಮೇಲೆ ಹೇರಲಾಗಿದೆ. ಇಂತಹ ಕರಿ ನಿಯಮದ ವಿರುದ್ಧ ಎಸ್ ಕೆ ಎಸ್ ಎಸ್ ಎಸ್ ಮಿತ್ತಬೈಲು ಕ್ಲಸ್ಟರ್ ವತಿಯಿಂದ ಜನವಿರೋಧಿ ಕಾಯ್ದೆಯ ವಿರುದ್ಧ ಬಹು ಇರ್ಷಾದ್ ದಾರಿಮಿ ಉಸ್ತಾದರ ನೇತ್ರತ್ವದಲ್ಲಿ ಅಭಿಯಾನ ಕೈಗೊಳ್ಳಲಾಯಿತು ಮಿತ್ತಬೈಲ್ ಕ್ಲಸ್ಟರ್ ಪದಾಧಿಕಾರಿಗಳು ಉಪಸ್ಥಿತಿ ಇದ್ದರು.