Monday, April 8, 2024

ಸೇವಾ ಭಾರತಿ ಹಾಗೂ ಹಿಂದೂಜಾಗರಣಾ ವೇದಿಕೆ ತುಂಬೆ ವತಿಯಿಂದ ರಕ್ತದಾನ ಶಿಬಿರ

ಸೇವಾ ಭಾರತಿ ಬಂಟ್ವಾಳ ತಾಲೂಕು ಮತ್ತು ಹಿಂದೂ ಜಾಗರಣಾ ವೇದಿಕೆ ತುಂಬೆ ವಲಯ ಇದರ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಮತ್ತು ವೆನ್ಲಾಕ್ ಸರ್ಕಾರಿ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮಾರ್ಗದರ್ಶಕರಾಗಿದ್ದ ದಿI ವೆಂಕಟರಮಣ ಹೊಳ್ಳರವರ ಸಂಸ್ಮರಣಾರ್ಥ *”35ನೇ ರಕ್ತದಾನ ಶಿಬಿರ”* ಇಂದು 20.06.2021ನೇ ರವಿವಾರ ತುಂಬೆ “ಶ್ರೀರಾಮ ನಗರದ ಶ್ರೀ ಶಾರದಾ ಸಭಾ ಭವನ”ದಲ್ಲಿ ನಡೆಯಿತು.

ದಿವಂಗತ ವೆಂಕಟರಮಣ ಹೊಳ್ಳರು ವಿವಾಹವಾಗದೆ ತನ್ನ ಇಡೀ ಜೀವನವನ್ನೇ ಸಂಘದ ಸೇವೆಗಾಗಿ ಸಮರ್ಪಿಸಿದವರು. ಜೀವನದುದ್ದಕ್ಕೂ ಬರೀಗಾಲಲ್ಲೇ ಸಂಚರಿಸಿ ಸಂಘ ಸೇವೆಯನ್ನು ಭಗವಂತನ ಸೇವೆ ಎಂಬಂತೆ ನಿಷ್ಠೆಯಿಂದ ಕೈಗೊಂಡು ಇಡೀ ಹಿಂದೂ ಸಮಾಜಕ್ಕೆ ಆದರ್ಶವಾದವರು. ತನ್ನ ಉಸಿರಿರುವ ಕೊನೆ ಘಳಿಗೆಯಲ್ಲೂ ಇಳಿವಯಸ್ಸಿನಲ್ಲೂ ರಕ್ತದಾನದ ಸೇವೆಯನ್ನು ಸಮರ್ಪಿಸಿ ರಾಷ್ಟ್ರಸೇವೆಯ ವೃತವನ್ನಾಚರಿಸಿದ ಪೂಜ್ಯ ಹೊಳ್ಳರು ನಮ್ಮನ್ನು ಅಗಲಿದ್ದರೂ ಅವರ ಆದರ್ಶಪೂರ್ಣ ಜೀವನವನ್ನು ದಾರಿದೀಪವನ್ನಾಗಿಸಿ ಇಡೀ ಹಿಂದೂ ಸಮಾಜ ಇಂದು ವಿವಿಧೆಡೆ ಸಾಮಾಜಿಕವಾಗಿ ಸೇವೆಯನ್ನೂ ಗೈಯ್ಯುತ್ತಿರುವುದು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಆರೆಸ್ಸೆಸ್ ಪುತ್ತೂರು ಜಿಲ್ಲಾ ಕಾರ್ಯವಾಹ ವಿನೋದ್ ಕೊಡ್ಮಾಣ್ ನುಡಿದರು.

ತುಂಬೆ ಗ್ರಾಮದಲ್ಲಿ ಅತಿ ದೊಡ್ಡ ಕೊರೊನಾ ವಾರಿಯರ್ಸ್ ರೂಪದಲ್ಲಿ ಜನರ ಸೇವೆ ಮಾಡಿದ ಇಂದಿನ ಪ್ರಮುಖ ಅತಿಥಿಯಾದ ಖ್ಯಾತ ವೈದ್ಯರಾದ ಡಾ. ರಘುರಾಮ ಶೆಟ್ಟಿ ಗುಳ್ಳಾಡಿ ಇವರನ್ನು ಸನ್ಮಾನಿಸಲಾಯಿತು. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದಾ ಕಾಲ ರಕ್ತದಾನ ಮಾಡುತ್ತಾ ರಕ್ತದಾನದ ಬೇಡಿಕೆಗೆ ಸ್ಪಂದಿಸುತ್ತಿರುವ “ಯುವಶಕ್ತಿ ರಕ್ತನಿಧಿ” ತಂಡವನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಉದ್ಯಮಿಗಳಾದ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಕಿಶೋರ್ ಕುಮಾರ್, ಹಿಂ.ಜಾ.ವೇ ಜಿಲ್ಲಾಧ್ಯಕ್ಷರಾದ ಜಗದೀಶ್ ಹೊಳ್ಳರಬೈಲ್, ಹಿಂ.ಜಾ.ವೇ ತಾಲೂಕು ಅಧ್ಯಕ್ಷ ತಿರುಲೇಶ್ ಬಡಗಬೆಳ್ಳೂರು ಮತ್ತು ಹಿಂ.ಜಾ.ವೇ ತುಂಬೆ ವಲಯ ಅಧ್ಯಕ್ಷ ವಿಜಯ್ ಕುಮಾರ್ ಕಜೆಕಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೊಡ್ಮಣ್ ಕಾಂತಪ್ಪ ಶೆಟ್ಟಿ, ತೇವು ತಾರಾನಾಥ ಕೊಟ್ಟಾರಿ, ಗಣೇಶ್ ಸುವರ್ಣ ತುಂಬೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಮಾಧವ ನಾಣ್ಯ, ಪ್ರವೀಣ್ ಬಿ ತುಂಬೆ, ಸುರೇಶ್ ನಾಯ್ಕ, ದಾಮೋದರ ನೆತ್ತರಕೆರೆ, ಮನೋಹರ ಕುಂಜತ್ತೂರು, ಪ್ರಶಾಂತ್ ಕೆಂಪು ಗುಡ್ಡೆ, ಸುಧಾಕರ ರಾಮಲ್ ಕಟ್ಟೆ, ಸಿದ್ದಪ್ಪ ಅಂಗಡಿ, ರಾಘವ ಬಂಗೇರ ಪೇರ್ಲಬೈಲ್, ಪುರುಷೋತ್ತಮ ಗಟ್ಟಿ, ಯೋಗೀಶ್ ಕೋಟ್ಯಾನ್, ಯಶವಂತ ಬೊಳ್ಳಾರಿ, ಕಿಶೋರ್ ರಾಮಲ್ ಕಟ್ಟೆ, ಅರುಣ್ ಗಾಣದಲಚ್ಚಿಲ್ ಸೇರಿದಂತೆ ಹಿತೈಷಿಗಳು ಸೇರಿದಂತೆ ಸಂಘದ ಹಲವು ಪ್ರಮುಖರು, ದೇವದುರ್ಲಭ ಕಾರ್ಯಕರ್ತರು, ಕೆಎಂಸಿ ಆಸ್ಪತ್ರೆ ಮತ್ತು ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಾಲ್ವರು ಮಹಿಳೆಯರು ಸೇರಿದಂತೆ 110 ಮಂದಿ ಸ್ವಯಂಸೇವಕರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಓರ್ವ ಮಹಿಳೆ ತನ್ನ ಜನುಮದಿನವನ್ನು ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಸುಶಾನ್ ಆಚಾರ್ಯ ಸ್ವಾಗತಿಸಿದರು. ಜಗದೀಶ್ ಕಡೆಗೋಳಿ ನಿರೂಪಿಸಿದರು.

More from the blog

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...