ಮಧ್ಯ ರಾತ್ರಿ ವೇಳೆ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ತಹಶಿಲ್ದಾರ್ ರಶ್ಮಿ. ಎಸ್.ಆರ್.
ತಹಶಿಲ್ದಾರ್ ಗೆ ಸಾಥ್ ನೀಡಿದ ರಾಜೇಶ್ ಬಳಿಗಾರ್ ನೇತ್ರತ್ವದ ಅರಣ್ಯ ಇಲಾಖಾ ಅಧಿಕಾರಿಗಳ ತಂಡ.
ಬಂಟ್ವಾಳ: ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ನದಿಯಿಂದ ಮರಳು ತೆಗೆದು ಮಾರಟ ಮಾಡುತ್ತಿದ್ದ ಸ್ಥಳವೊಂದಕ್ಕೆ ಮಧ್ಯ ರಾತ್ರಿ ವೇಳೆ ಅರಣ್ಯ ಅಧಿಕಾರಿಗಳ ಜೊತೆ ದಾಳಿ ನಡೆಸಿ ಮರಳುಗಾರಿಕೆಗೆ ಬಳಸುವ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.
ದಾಳಿಯ ವೇಳೆ ಸ್ಥಳದಲ್ಲಿ ದ್ದ ಆರೋಪಿಗಳು ಪರಾರಿಯಾಗಿದ್ದಾರೆ.
ಪಾಣೆಮಂಗಳೂರು ಹಳೆಯ ಸೇತುವೆ ಅಡಿ ಭಾಗದಿಂದ ರಾತ್ರಿ ವೇಳೆ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಆರೋಪ ದ ಮೇಲೆ ತಹಶಿಲ್ದಾರ್ ರಶ್ಮಿ. ಎಸ್.ಆರ್.ಅವರು ಗೌಪ್ಯವಾಗಿ ಅರಣ್ಯ ಇಲಾಖಾ ಅಧಿಕಾರಿಗಳ ಜೊತೆ ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದು ಸ್ಥಳದಲ್ಲಿ
ಒಂದು ಟಿಪ್ಪರ್ , ಒಂದು ದೋಣಿ ಬಿಟ್ಟು ಪರಾರಿಯಾಗಿದ್ದಾರೆ.
ಜಿಲ್ಲಾಡಳಿತ ದ ಅದೇಶದಂತೆ ಸುರಕ್ಷತೆಯ ದೃಷ್ಟಿಯಿಂದ ಸೇತುವೆಯ ಸಮೀಪ ಇಲಾಖೆ ನಿಗದಿಪಡಿಸಿದ ದೂರದವರೆಗೆ ಯಾವುದೇ ಕಾರಣಕ್ಕೂ ಮರಳುಗಾರಿಕೆ ಮಾಡಬಾರದೆಂಬ ಕಟ್ಟು ನಿಟ್ಟಿನ ಆದೇಶ ಇದ್ದರೂ ಕೂಡ ಅಕ್ರಮವಾಗಿ ರಾತ್ರಿ ವೇಳೆ ಮೆಷಿನ್ ಬಳಕೆ ಮಾಡಿ ಮರಳು ತೆಗೆಯುವುದರ ಬಗ್ಗೆ ದೂರುಬಂದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಆದರಿಸಿ ರಾತ್ರಿ ದಿಡೀರ್ ದಾಳಿ ನಡೆಸಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳ ಆಧಾರದ ಮೇಲೆ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.
ತಹಶಿಲ್ದಾರ್ ರಶ್ಮಿ. ಎಸ್.ಆರ್ ಅವರು ಈ ಹಿಂದೆಯೂ ಅಕ್ರಮ ಮರಳುಗಾರಿಕೆ ಬಗ್ಗೆ ಅನೇಕ ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದರು.
ದಾಳಿಯಲ್ಲಿ ರಾಜೇಶ್ ಬಳಿಗಾರ್ ನೇತ್ರತ್ವದ ತಂಡ ಭಾಗವಹಿಸಿದ್ದು, ಅರಣ್ಯ ಇಲಾಖಾ ಅಧಿಕಾರಿಗಳಾದ ಪ್ರೀತಮ್, ಜಿತೇಶ್, ಸಿಬ್ಬಂದಿ ಗಳಾದ ಬಸವ ಹಾಗೂ ಪ್ರವೀಣ್ ಭಾಗವಹಿಸಿದ್ದರು.