ಬಂಟ್ವಾಳ: ಇರಾ ವಲಯ ಕಾಂಗ್ರೆಸ್ ವತಿಯಿಂದ ಗ್ರಾಮದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಯ ಉದ್ದೇಶದಿಂದ ಕಾರ್ಯಕರ್ತರ ಸಭೆಯು ದಿ.ರವೀಂದ್ರ ಕರ್ಕೇರರವರ ಮನೆಯಲ್ಲಿ ಮಂಗಳೂರು ಶಾಸಕರಾದ ಯು.ಟಿ.ಖಾದರ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಇರಾ ಗ್ರಾಮದ ಅಭಿವೃದ್ಧಿಯಲ್ಲಿ ಕ್ಷೇತ್ರ ವಿಂಗಡನೆಯ ಬಳಿಕ ಆದ್ಯತೆಯ ಮೇಲೆ ಹಲವಾರು ಕಾಮಗಾರಿಗಳನ್ನು ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಮತ್ತು ನಾಯಕರ ವಿಶ್ವಾಸ ಪಡೆದು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಕುರ್ನಾಡು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆ್ಯಗ್ನೇಸ್ ಡಿಸೋಝ, ಉಪಾಧ್ಯಕ್ಷರಾದ ಮೊಯಿದಿನ್ ಕುಂಞಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಂಪಿಲ, ಪ್ರಮುಖ ನಾಯಕರಾದ ಅಚ್ಯುತ ಪೂಜಾರಿ, ಉಸ್ಮಾನ್ ಕುರಿಯಾಡಿ,ಪುಷ್ಪಲತಾ ಕರ್ಕೇರ, ನಳಿನಾಕ್ಷಿ, ಸಿ.ಎಚ್. ಮೊಹಮ್ಮದ್ ಹಾಜಿ, ಎಂ.ಬಿ.ಉಮ್ಮರ್, ಯಾಕುಬ್, ಪ್ರತಾಪ್ ಕರ್ಕೇರ ಇನ್ನಿತರರು ಉಪಸ್ಥಿತರಿದ್ದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶ್ರಫ್ ಸಂಪಿಲ ಧನ್ಯವಾದ ಸಲ್ಲಿಸಿದರು.