Saturday, April 6, 2024

ಬಿಸಿರೋಡಿನಲ್ಲಿ ಉದ್ಯಮಿ ವಿವೇಕ್ ಶೆಟ್ಟಿ ಮಾಲಕತ್ವದಲ್ಲಿ ರಿಬ್ಬನ್ಸ್ ಆಂಡ್ ಬಲೂನ್ಸ್ ನೂತನ ಕೇಕ್ ಶಾಪ್ ಶುಭಾರಂಭ

ಬಂಟ್ವಾಳ: ಗುಣಮಟ್ಟದ ಆಹಾರ ಉತ್ಪನ್ನದ ವಸ್ತುಗಳಿಗೆ ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಬೇಡಿಕೆಯಿದ್ದು, ಬೆಳೆಯುತ್ತಿರುವ ಬಂಟ್ವಾಳ ಪಟ್ಟಣಕ್ಕೆ ರಿಬ್ಬನ್ಸ್ ಆ್ಯಂಡ್ ಬಲೂನ್ಸ್ ಶಾಖೆಯು ಹೊಸ ಚೈತನ್ಯವನ್ನು ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್‌ಕುಮಾರ್ ಕಟೀಲು ಅವರು ಹೇಳಿದರು.
ಅವರು ಮುಂಬಯಿಯ ಪ್ರಖ್ಯಾತ ಕೇಕ್ ತಯಾರಿಕೆ ಸಂಸ್ಥೆ ರಿಬ್ಬನ್ಸ್ ಆ್ಯಂಡ್ ಬಲೂನ್ಸ್ನ ನೂತನ ೧೪೧ನೇ ಶಾಖೆಯು ಸೋಮವಾರ ಬಿ.ಸಿ.ರೋಡಿನ ಅನ್ಸಾರ್ ಕಾಂಪ್ಲೆಕ್ಸ್ನಲ್ಲಿ ಉದ್ಯಮಿ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರ ಮಾಲಕತ್ವದ ವೃಷಭ ಎಂಟರ್‌ಪ್ರೈಸಸ್ ಅಡಿಯಲ್ಲಿ ಶುಭಾರಂಭಗೊಂಡಿತು.
ಈ ನೂತನ ಶಾಖೆಗೆ ಸಂಸದರು ಬೇಟಿ ನೀಡಿ ಶುಭಹಾರೈಸಿ ಬಳಿಕ ಮಾತನಾಡಿದರು.
ಮುಂಬಯಿಯಲ್ಲಿ ಉದ್ಯಮಿಯಾಗಿರುವ ವಿವೇಕ್ ಶೆಟ್ಟಿಯವರು ತನ್ನ ಹುಟ್ಟೂರಿನ ಮೇಲಿನ ಅಭಿಮಾನದಿಂದ ಇಲ್ಲಿನ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಉದ್ಯಮದ ಜೊತೆಯಲ್ಲಿ ಸಾಮಾಜಿಕ, ಧಾರ್ಮಿಕ , ಸಂಘಟನಾತ್ಮಕವಾಗಿ ವಿವೇಕ್ ಶೆಟ್ಟಿ ಅವರ ಸೇವೆ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ ಎಂದು ಅವರು ಅಭಿನಂದಿಸಿದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ದೀಪ ಬೆಳಗಿಸಿ ಶುಭಹಾರೈಸಿದರು.

ನೂತನ ಶಾಖೆಗೆ ಮಾಜಿ ಸಚಿವ ಬಿ.ರಮಾನಾಥ ರೈ, ಎ.ಜೆ.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಪ್ರಶಾಂತ್ ಮಾರ್ಲ, ನವದುರ್ಗಾ ಪುಡ್ ಪೊಡಕ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಗುಣಪಾಲ್ ಶೆಟ್ಟಿ, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ದೇವಿಪ್ರಸಾದ್ ಪೂಂಜ, ಅರುಣ್ ಆಳ್ವ, ಗೋಕುಲ್ ಭಂಡಾರಿ, ಕಿರಣ್ ಆಳ್ವ, ಸುದೀಪ್‌ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪುರುಷೋತ್ತಮ ಶೆಟ್ಟಿ, ಪುಷ್ಪರಾಜ್ ಚೌಟ, ಸುಕೇಶ್ ಚೌಟ, ಲೋಕನಾಥ ಶೆಟ್ಟಿ, ಚಂದ್ರಾವತಿ ಬಿ.ಶೆಟ್ಟಿ, ಸಂಧ್ಯಾ ವಿವೇಕ್ ಶೆಟ್ಟಿ, ಲಲಿತಾ ಶೆಟ್ಟಿ, ವರ್ಷಾ, ವೀಕ್ಷಾ, ವಿಖ್ಯಾತ್ ಶೆಟ್ಟಿ, ವರ್ಷಾ ಹೆಗ್ಡೆ, ವಿಹಾರ ಹೆಗ್ಡೆ ಮೊದಲಾದವರು ಭೇಟಿ ನೀಡಿ ಶುಭಹಾರೈಸಿದರು.
ಮಾಲಕ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಮುಂಬಯಿಯ ಪ್ರಖ್ಯಾತ ಕೇಕ್ ತಯಾರಿಕೆ ಸಂಸ್ಥೆ ರಿಬ್ಬನ್ಸ್ ಆ್ಯಂಡ್ ಬಲೂನ್ಸ್ ದೇಶಾದ್ಯಂತ ೧೪೧ನೇ ಶಾಖೆಗಳನ್ನು ಹೊಂದಿದ್ದು, ದ.ಕ.ಹಾಗೂ ಉಡುಪಿ ಜಿಲ್ಲೆಯಲ್ಲಿ ೨೨ ಶಾಖೆಗಳ ಮೂಲಕ ಕರಾವಳಿ ಜನತೆಯ ಮೆಚ್ಚುಗೆಯನ್ನು ಗಳಿಸಿದೆ. ಬರ್ತ್ಡೇ ಪಾರ್ಟಿ, ಇನ್ನಿತರ ಈವೆಂಟ್‌ಗಳ ಆಯೋಜನೆಯಲ್ಲೂ ಜನಪ್ರಿಯತೆಗಳಿಸಿದೆ ಸಂಸ್ಥೆಯ ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೆಜರ್ ನಿತೇಶ್ ಶೆಟ್ಟಿ ಇರಂದಾಡಿ ತಿಳಿಸಿದ್ದಾರೆ.

More from the blog

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...