ತೌಕ್ತೆ ಚಂಡಮಾರುತದ ಕಾರಣದಿಂದಾಗಿ ಮುಂಬೈನಲ್ಲಿ ನಡೆದ ಬಾರ್ಜ್ ದುರಂತದಲ್ಲಿ ಸಿನಿಮೀಯ ರೀತಿಯಲ್ಲಿ ಸತತ 12 ಗಂಟೆಗಳ ಕಾಲ ಲೈಫ್ ಜಾಕೆಟ್ ಮುಖಾಂತರ ಸಮುದ್ರದಲ್ಲಿ ಈಜಾಡಿ ಭಾರತೀಯ ನೌಕಾಪಡೆಯ ಸತತ ಕಾರ್ಯಾಚರಣೆಯಿಂದ ಬದುಕಿ ಬಂದ ಸಾಹಸಿ ಯುವಕ ಸುಕುಮಾರ್ ಮಾರುತಿನಗರ, ನರಿಕೊಂಬು ಇವರನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತುರವರು ಕಚೇರಿಯಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿಬಿಜೆಪಿ ಬಂಟ್ವಾಳ ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಉಪಾಧ್ಯಕ್ಷರಾದ ಚಿದಾನಂದ ರೈ, ಗೋಳ್ತಮಜಲು ಮಹಾಶಕ್ತಿ ಕೇಂದ್ರದ ಪ್ರ. ಕಾರ್ಯದರ್ಶಿ ಯಶೋಧರ ಕರ್ಬೆಟ್ಟು, ಗ್ರಾಮ ಪಂಚಾಯತ್ ಸದಸ್ಯರಾದ ಶುಭ ಶಶಿಧರ್ ಮಾರುತಿನಗರ, ಚೇತನ್ ಏಲಬೆ, ಅರುಣ್ ಕುಮಾರ್, ಪುರುಷೋತ್ತಮ ಎಸ್, ರಂಜಿತ್ ಕೆದ್ದೇಲು, ಪ್ರಮುಖರಾದ ಆನಂದ ಶಂಭೂರು, ಮಂಜಪ್ಪ ಕುಲಾಲ್, ಸುರೇಶ್ ಕೋಟ್ಯಾನ್, ಶಶಿಧರ್ ಎನ್., ಕಾರ್ಯಕರ್ತರಾದ ತಿಲಕ್ ರಾಜ್, ಸಂದೀಪ್ ಕುಮಾರ್, ಕಾರ್ತಿಕ್, ಸಚಿನ್ ಉಪಸ್ಥಿತರಿದ್ದರು.