ಬಂಟ್ವಾಳ: ತಾಲೂಕಿನಲ್ಲಿ ಶನಿವಾರ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ನಾಲ್ಕು ಕಡೆಗಳಲ್ಲಿ ಮನೆಗೆ ಹಾನಿಯಾಗಿದೆ.
ಪುರಸಭಾ ವ್ಯಾಪ್ತಿಯ ಮೈರಾನ್ ಪಾದೆ ಬೇಬಿ ಅವರ ಮನೆಗೆ ಮರ ಬಿದ್ದು, ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಕೋರ್ಯ ಕುಂಟಲ್ಪಾಡಿ ಎಂಬಲ್ಲಿ ದೇವಕಿ ಕೋಂ ಮುತ್ತಪ್ಪ ಪೂಜಾರಿ ಅವರ ವಾಸ್ತವ್ಯದ ಮನೆಗೆ ಮಳೆ ಗಾಳಿಯಿಂದ ಹಾನಿಯಾಗಿರುತ್ತದೆ.
ಕೊಯಿಲ ಗ್ರಾಮದ ಕೈತ್ರೋಡಿ ಕ್ವಾಟ್ರಸ್ ಶಾಂತಾ ಅವರ ಮನೆಗೆ ಹಾನಿಯಾಗಿದೆ. ಮೂಡನಡುಗೋಡು ಗ್ರಾಮದ ನಡ್ಯೋಡಿಗುತ್ತು ಅಮ್ಮುಶೆಟ್ಟಿ ಇವರ ಮನೆಗೆ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಪಕ್ಕಾ ಮನೆ ಹಾನಿಯಾಗಿರುತ್ತದೆ.