


ಬಂಟ್ವಾಳ: ಮನೆಯೊಂದಕ್ಕೆ ಮರ ಬಿದ್ದು ಹಾನಿಯಾದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಮೈರಾನ್ ಪಾದೆ ಎಂಬಲ್ಲಿ ನಡೆದಿದೆ.
ಶನಿವಾರ ಸಂಜೆ ವೇಳೆ ಬೀಸಿದ ಭಾರಿ ಮಳೆ ಗಾಳಿಗೆ ಬಿ.ಮೂಡ ಗ್ರಾಮದ ಮೈರಾನಾಪಾದೆ ನಿವಾಸಿ ಪಕೀರ ಎಂಬವರ ಮಗ ಬೇಬಿ ಮೈರನಾಪಾದೆ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ.
ಘಟನೆ ಯಿಂದ ಮನೆಯ ಹಂಚು ಮತ್ತು ಗೋಡೆಗೆ ಹಾನಿಯಾಗಿದೆ, ಎಷ್ಟು ನಷ್ಟ ಉಂಟಾಗಿದೆ ಎಂಬುದರ ಬಗ್ಗೆ ವರದಿಯಾಗಿಲ್ಲ, ಘಟನಾ ಸ್ಥಳಕ್ಕೆ ಬಿ.ಮೂಡ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ಸ್ಥಳಿಯ ಪುರಸಭಾ ಸದಸ್ಯ ಹರಿಪ್ರಸಾದ್ ಭಂಡಾರಿ ಬೆಟ್ಟು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


