ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಬಡಗಕಜೆಕಾರ್ ಗ್ರಾಮ ಪಂಚಾಯತ್ ವತಿಯಿಂದ ಇಂದಿರಾ ಕ್ಷೇಮ ನಿಧಿಯ ಮುಖಾಂತರ ಕೋರೊಣ ಸೋಂಕಿತರ ಮನೆಗಳಿಗೆ ಅಕ್ಕಿ ಮತ್ತು ದಿನ ಬಳಕೆಯ ವಸ್ತುಗಳ ಕಿಟ್ ವಿತರಿಸಿ ಇಂದಿರಾಗಾಂಧಿ ದೇಶಕ್ಕೆ ಆದರ್ಶ ಮಹಿಳೆಯಾಗಿದ್ದು ದೇಶದ ಬಡವರ ಹಸಿವನ್ನು ನೀಗಿಸುವಲ್ಲಿ ಕ್ರಾಂತಿಕಾರಿಯಾಗಿದ್ದರು ಎಂದು ರಮಾನಾಥ ರೈ ತಿಳಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಕರ್ ಜೈನ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್ ಕೊಯಿಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರಾ ಗ್ರಾಮ ಪಂಚಾಯತ್ ಅಧ್ಯಕ್ಷ್ಷೆ ಆಸ್ಮ ಅಜೀಜ್ ಉಪಾಧ್ಯಕ್ಷ ಡೀಕಯ್ಯ ಬಂಗೇರ ಸದಸ್ಯರಾದ ಜೋನ್ ಸೇರಾ, ರಕ್ಷಿತಾ ಪೂಜಾರಿ, ಮೋಹಿನಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಜಯ ಬಂಗೇರ ಮುಖಂಡರಾದ ವಾಸು ಪೂಜಾರಿ, ಸುದಾಕರ್ ಶೆಣೈ, ವಿಶ್ವನಾಥ್ ಪೂಜಾರಿ, ಗಂಗಾಧರ ಪೂಜಾರಿ, ನಾರಯಾಣ ಕಜೆಕಾರ್ ವಿಠಲ ಕರ್ಲ, ಆನಂದ ಮಾಡ, ಶೋಭಾ ಪಾರೊಟ್ಟು, ರಾಕೇಶ್ ಪೂಜಾರಿ ಪಾದೆ, ಅಬ್ದುಲ್ಲಾ, ಹನೀಫ್ ಕೆದೀಲೆ, ಯಾಕುಬ್ ಪಾಂಡವರಕಲ್ಲು, ಜಾನಕಿ ಕಜೆಕಾರ್, ಅಬೂಬಕ್ಕರ್, ಪದ್ಮನಾಭ ಸಾವಂತ್ ಉಪಸ್ಥಿತರಿದ್ದರು.