ಪುಂಜಾಲಕಟ್ಟೆ: ಪುಂಜಾಲಕಟ್ಟೆ ಪೆಟ್ರೋಲ್ ಪಂಪಿನಲ್ಲಿ ಕಾಂಗ್ರೇಸ್- ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಕಾಂಗ್ರೇಸ್ ನೇತ್ರತ್ವದಲ್ಲಿ ಕೇಂದ್ರ ಸರಕಾರದ ನೀತಿಯ ವಿರುದ್ದ ಪ್ರತಿಭಟನೆ ನಡೆಯುತ್ತಿದ್ದು ಇಂದು ಬೆಳಿಗ್ಗೆ ಪುಂಜಾಲಕಟ್ಟೆ ದೈಕಿನಕಟ್ಟೆ ಪೆಟ್ರೋಲ್ ಪಂಪ್ ನಲ್ಲಿ ಪ್ರತಿಭಟನೆ ನಡೆಸಿದರು.
ಪೆಟ್ರೋಲ್ , ಡಿಸೇಲ್ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳದ ವಿರುದ್ಧ ಕಾಂಗ್ರೇಸಿಗರು ಪ್ರತಿಭಟನೆಯಲ್ಲಿ ತೊಡಗಿ ಪ್ರಧಾನಿ ಮೋದಿಗೆ ಧಿಕ್ಕಾರ ಕೂಗುತಿದ್ದ ಸಂದರ್ಭದಲ್ಲಿ ಪೆಟ್ರೋಲ್ ಹಾಕಲು ಪೆಟ್ರೋಲ್ ಪಂಪ್ ಗೆ ಬಂದ ಮಾಜಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಅವರು ಪ್ರಧಾನಿ ಮೋದಿಯವರಿಗೆ ಜೈಕಾರ ಕೂಗಿದ್ದಾರೆ ಈ ಸಂದರ್ಭದಲ್ಲಿ ಕಾಂಗ್ರೇಸ್ ಸದಸ್ಯ ರ ನಡುವೆ ಮಾತಿನ ಚಕಮಕಿ ನಡೆದಿದೆ.
ಪೆಟ್ರೋಲ್ ಹಾಕಲು ಬಂದ ಬಿಜೆಪಿ ಕಾರ್ಯಕರ್ತರು *ಧರ್ಮದಾನಿ ಪ್ರದಾನಿ , ಉಚಿತ ವ್ಯಾಕ್ಸಿನ್ , ಆಯುಷ್ಮಾನ್ ಭಾರತ್ , ಉಚಿತ ಪಡಿತರ , ರೈತರಿಗೆ ಕಿಸಾನ್ ಸನ್ಮಾನ್ ಗಳನ್ನು ಧರ್ಮಾರ್ಥವಾಗಿ ನೀಡುವ ಪ್ರಧಾನಿ ಎಂದು ಹೇಳಿದ್ದಲ್ಲದೆ ಅವರ ಪರವಾಗಿ ಜಿ.ಪಂ. ಮಾಜಿ ಸದಸ್ಯ ತುಂಗಪ್ಪ ನೇತ್ರತ್ವದಲ್ಲಿ ಜೈಕಾರ ಕೂಗಿದ್ದಾರೆ.
ಈ ಸಂದರ್ಭ ಪ್ರಧಾನಿಗೆ ಮತ್ತು ಜಿ.ಪಂ. ಸದಸ್ಯ *ಯಂ. ತುಂಗಪ್ಪ ಬಂಗೇರರಿಗೆ* ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾಂಗೈ ಕಾರ್ಯಕರ್ತ ಮೋಹನ ಅವರ ವಿರುದ್ದ ರೊಚ್ಚಿಗೆದ್ದ ಬಿಜೆಪಿ ಯುವಕರು ತರಾಟೆಗೆ ತೆಗೆದುಕೊಂಡರು.
ಕಾಂಗ್ರೇಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಘರ್ಷಣೆಯ ಹಂತವನ್ನು ತಲುಪುವುದನ್ನು ಮನಗಂಡ ತುಂಗಪ್ಪ ಬಂಗೇರ , ಪದ್ಮಶೇಖರ ಜೈನ್, ಬೇಬಿ ಕುಂದರ್ ಕಾರ್ಯಕರ್ತರನ್ನು ಸಮಾಧಾನಪಡಿಸಿ ಬಿಗು ವಾತಾವರಣವನ್ನು ತಿಳಿಗೊಳಿಸಿದ್ದಾರೆ.