ವಿಶ್ವ ಪರಿಸರ ದಿನದ ಅಂಗವಾಗಿ ಯು.ಟಿ.ಕೆ ಹೆಲ್ಪ್ ಲೈನ್ 24×7, ಹಾಗೂ ಪುದು ಯುವ ಕಾಂಗ್ರೆಸ್,ಪುದು ವಲಯ ಕಾಂಗ್ರೆಸ್ ವತಿಯಿಂದ ಸುಜೀರ್ ಶಾಲಾ ವಠಾರದಲ್ಲಿ ಸಸಿ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಬಳಿಕ ಮಾತನಾಡಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಉಮರ್ ಫಾರೂಕ್ ಫರಂಗಿಪೇಟೆ ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರ, ಕಾಡು, ಸಾಗರ ಇತ್ಯಾದಿ ಎಂದೆಂದಿಗೂ ಉಳಿಯುವುದು ಬಹಳ ಮುಖ್ಯ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಗಳವರೆಗೂ ಹೀಗೆಯೂ ಉಳಿಯಬೇಕಿದೆ.
ನಮ್ಮ ಹಿತ್ತಲಿನಲ್ಲಿ ಅಥವಾ ನೆರೆಹೊರೆಯಲ್ಲಿ ಹೊಸ ಮರವನ್ನು ನೆಡುವ ಮೂಲಕ ನಮ್ಮ ಪರಿಸರ ಕಾಳಜಿಯನ್ನು ತೋರಿಸಿಬೇಕು.
ಈ ಸಂದರ್ಭದಲ್ಲಿ, ಪುದು_ ಗ್ರಾಮ_ _ಪಂಚಾಯತ್ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ,ಮುಡಿಪು ಬ್ಲಾಕ್ ಅಲ್ಪಸಂಖ್ಯಾತರ ಅಧ್ಯಕ್ಷ ಇಮ್ತಿಯಾಜ್ ತುಂಬೆ ಉಪಾಧ್ಯಕ್ಷರಾದ ಲೀಡಿಯ ಪಿಂಟೋ,_ಪುದು ವಲಯ ಕಾಂಗ್ರೆಸ್ ಅಧ್ಯಕ್ಷರಾದ ರಫೀಕ್ ಪೇರಿಮಾರ್,_ _ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮಜೀದ್ ಪೇರಿಮಾರ್,,ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್_ _ಮುಖಂಡ ಹಿಶಾಮ್ ಫರಂಗಿಪೇಟೆ_,ಪುದು ಯುವ ಕಾಂಗ್ರೆಸ್ ಅಧ್ಯಕ್ಷರಾದ ನಿಜಾಮ್ ಕುಂಜತ್ತಕಲ್,ಪುದು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಲ್ ಸುಜೀರ್, ಕಿಶೋರ್ ಸುಜೀರ್, ಮಹಮ್ಮದ್ ಮೋನು ,ರಝಕ್ ಅಮೆಮರ್ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಸ್ತುವಾರಿ ಸಮೀಜ್ ಫರಂಗಿಪೇಟೆ, ಪುದು ಯುವ ಕಾಂಗ್ರೆಸ್ ಸದಸ್ಯ ಇನ್ಷದ್ ಮಾರಿಪಳ್ಳ ,ಹಾಗೂ ಇನ್ನಿತರರು ಉಪಸ್ಥಿತರಿದ್ದರು.