ಬಂಟ್ವಾಳ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಪುದು ವಲಯ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಫರಂಗಿಪೇಟೆ ಪೆಟ್ರೋಲ್ ಬಂಕಿನ ಮುಂಭಾಗ 100 ನಾಟೌಟ್ ಪ್ರತಿಭಟನೆ ನಡೆಯಿತು.
ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ, ಹಿಂದೆ ಯುಪಿಎ ಸರಕಾರ ಇದ್ದಾಗ ಪೆಟ್ರೋಲ್ ಬೆಲೆಯನ್ನು 70 ರೂ.ದಾಟಲು ಬಿಟ್ಟಿರಲಿಲ್ಲ. ಆದರೆ ಬಿಜೆಪಿ ಸರಕಾರದ ಕೊರೊನಾ ಸಂದರ್ಭದಲ್ಲಿ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ಪೆಟ್ರೋಲ್ ಬೆಲೆ ಏರಿಸುವ ಮೂಲಕ ಜನರ ಜೀವನದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಅವರೇ ನಿಮ್ಮ ಆಚ್ಚೇ ದಿನ ನಮಗೆ ಬೇಕಿಲ್ಲ. ಹಿಂದೆ ಪೆಟ್ರೋಲ್ 60 ರೂ.ಗಳಿಗೆ ಸಿಗುತ್ತಿದ್ದ ದಿನಗಳೇ ಸಾಕು ಎಂದರು.
ಕೇವಲ ಒಂದು ವರ್ಷದಲ್ಲಿ 48 ಬಾರಿ ಬೆಲೆ ಏರಿಸುವ ಕೆಲಸವನ್ನು ಸರಕಾರ ಮಾಡಿದೆ. ಪೆಟ್ರೋಲ್ ಬೆಲೆಯ ಜತೆಗೆ ವಿದ್ಯುತ್ ಶುಲ್ಕ, ದಿನಬಳಕೆಯ ವಸ್ತುಗಳನ್ನು ಏರಿಸಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಬಿಜೆಪಿ ಸರಕಾರವನ್ನು ಕಿತ್ತು ಹಾಕಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುತ್ತಾರೆ. ಬೆಲೆ ಕಡಿಮೆ ಆಗದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಪುದು ಗ್ರಾ.ಪಂ.ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ಭಾಸ್ಕರ್ ರೈ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾಕ ಮೋರ್ಚಾ ಅಧ್ಯಕ್ಷ ಇಮ್ತಿಯಾಜ್ ತುಂಬೆ, ಇಕ್ಬಾಲ್ ಸುಜೀರ್, ರಝಾಕ್ ಅಮ್ಮೆಮಾರ್, ಮಮ್ತಾಜ್ ಸುಜೀರ್, ಫೆಝಲ್ ಅಮ್ಮೆಮಾರ್, ಹೇಮಲತಾ ಕುಂಪನಮಜಲು, ಲವಿನಾ ಕುಂಪನಮಜಲು, ರಿಯಾಜ್ ಕುಂಪನಮಜಲು, ಝಾಹೀರ್ ಕುಂಪನಮಜಲು, ಮೊಹಮ್ಮದ್ ಮೋನು ಫರಂಗಿಪೇಟೆ, ಝೀನರ್ ಕುಂಜರ್ಕಳ, ಹುಸೈನ್ ಪಾಡಿ, ರಶೀದಾ ಮಾರಿಪಳ್ಳ, ಕಿಶೋರ್ ಸುಜೀರ್, ರೆಹನಾ ಮಾರಿಪಳ್ಳ, ಇಶಾನ್ ಫರಂಗಿಪೇಟೆ, ಹಕೀಂ ಮಾರಿಪಳ್ಳ, ಮಜೀದ್ ಪೇರಿಮಾರ್, ನಿಜಾಮ್ ಕುಂಜರ್ಕಳ, ಫಯಾಜ್ ಅಮ್ಮೆಮಾರ್, ದೀಕ್ಷಿತ್ ಅತ್ತಾವರ, ಸಲೀಂ ಫರಂಗಿಪೇಟೆ, ಸಲಾಂ ಮಲ್ಲಿ, ಗಫೂರ್ ಫರಂಗಿಪೇಟೆ, ಇಸ್ಮಾಯಿಲ್ ಮಾಜಪೆ, ರಿಲ್ವಾನ್ ಅಮ್ಮೆಮಾರ್, ಇಂಶಾದ್ ಮಾರಿಪಳ್ಳ, ಸಜೀಜ್ ಫರಂಗಿಪೇಟೆ, ಆತೀಕ್ ಫರಂಗಿಪೇಟೆ, ರಫೀಕ್ ಫೆರಿಮಾರ್, ಕಿಶೋರ್ ಕುಂಬ್ಡೇಲು, ಕೆರೀಂ ಮಾರಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.