ಬಂಟ್ವಾಳ: ಕೋವಿಡ್ 19 ನ ಸಂಕಷ್ಟದ ಲಾಕ್ ಡೌನ್ ಅವಧಿಯಲ್ಲಿ ಕೆಲಸ ವಿಲ್ಲದೆ ಕೈ ಕಟ್ಟಿ ಕುಳಿತ ಯುವಕರ ಕೈಗೆ ಕೆಲಸ ನೀಡಿ ಗ್ರಾಮದ ಸ್ವಚ್ಚತೆ ಮತ್ತು ಅಭಿವೃದ್ಧಿಗೆ ವಿನೂತನ ಪ್ರಯೋಗ ಮಾಡಿ ಜನಮೆಚ್ಚುಗೆ ಗಳಿಸಿದ ಪೆರಾಜೆ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಶೆಟ್ಟಿ ಪಾಣೂರು.
ಪೆರಾಜೆ ಗ್ರಾಮದ ಮೂರನೇ ವಾರ್ಡ್ ನಲ್ಲಿ ಹೂಳು ತುಂಬಿದ್ದ ಚರಂಡಿಯ ಸ್ವಚ್ಚತೆ ಹಾಗೂ ರಸ್ತೆ ಬದಿಯಲ್ಲಿ ರುವ ಪೊದೆ ಗಳನ್ನು ತೆಗೆಯಲು ಪ್ರತಿ ವರ್ಷ ಪೆರಾಜೆ ಗ್ರಾ.ಪಂ.ಜೆ.ಸಿ.ಬಿ.ಯಂತ್ರವನ್ನು ಬಳಸಿಕೊಂಡು ಕಾಮಗಾರಿ ನಡೆಸುತ್ತಿತ್ತು.
ಜೆಸಿಬಿ ಯಂತ್ರ ಬಳಕೆ ಮಾಡಿದಾಗ ಕೇವಲ ಚರಂಡಿ ಮಾತ್ರ ಸ್ವಚ್ಚ ವಾಗುತ್ತಿತ್ತು ಬಿಟ್ಟರೆ ರಸ್ತೆ ಬದಿಯ ಗಿಡಪೊದೆಗಳು ಹಾಗೆಯೇ ಉಳಿಯುತ್ತಿತ್ತು.
ಈ ಬಾರಿಯೂ ಚರಂಡಿ ಹೂಳೆತ್ತುವ ಕಾರ್ಯ ಜೆ.ಸಿ.ಬಿ. ಮೂಲಕ ಮಾಡುವ ಯೋಜನೆಯನ್ನು ಪಂಚಾಯತ್ ಕೈಗೊಂಡಿತ್ತು.
ಆದರೆ ಭಿನ್ನವಾಗಿ ಯೋಚನೆ ಮಾಡಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಶೆಟ್ಟಿ ಪಾಣೂರು ಲಾಕ್ ಡೌನ್ ನಿಂದಾಗಿ ಗ್ರಾಮದ ಅನೇಕ ಯುವಕರು ಕೆಲಸವಿಲ್ಲದೆ ಜೀವನಕ್ಕಾಗಿ ಪರದಾಡುವ ಸಂದರ್ಭದಲ್ಲಿ ಅವರ ಕೈಗೆ ಕೆಲಸ ನೀಡುವ ಯೋಚನೆ ಮಾಡಿದರು.
ಗ್ರಾಮ ಪಂಚಾಯತ್ ಅನುದಾನದ ಮೂಲಕ ಕಾಮಗಾರಿ ನಡೆಯುವುದಾದರೂ ಇದರ ಪ್ರಯೋಜನ ಗ್ರಾಮದ ಜನರಿಗೆ ಸಿಗಲಿ ಎಂಬ ಇವರ ಯೋಚನೆ ಫಲನೀಡಿತು.
ಕೆಲಸವಿಲ್ಲದ ಯುವಕರು ಕಾಮಗಾರಿ ಕೈಗೆತ್ತಿಕೊಂಡು ಚರಂಡಿ ಹಾಗೂ ಪೊದೆಗಳನ್ನು ಸ್ವಚ್ಛ ಮಾಡುವ ಕಾರ್ಯ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದೆ.
*ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಶೆಟ್ಟಿ ಪಾಣೂರು*
ಕೆಲಸವಿಲ್ಲದ ಯುವಕರನ್ನು ಕರೆದು ದಿನಗೂಲಿ ಮೂಲಕ ಚರಂಡಿ ಹಾಗೂ ರಸ್ತೆ ಬದಿಯ ಪೊದೆಗಳನ್ನು ತೆಗೆಯುವ ಕಾಮಗಾರಿಯನ್ನು ಮಾಡುವಿರಾ ಎಂದು ಕೇಳಿದಾಗ ಅವರು ಒಪ್ಪಿ ಕೊಂಡಿದ್ದು ಅವರ ಕೈಗೆ ಕೆಲಸ ನೀಡಿಲಾಗಿದೆ , ಸ್ವತಃ ಸ್ಥಳದಲ್ಲಿ ನಿಂತುಕೊಂಡು ಸ್ವಚ್ಚತಾ ಕಾರ್ಯವನ್ನು ನೋಡಿಕೊಂಡಿದ್ದೇನೆ.ಗ್ರಾಮದ ಯುವಕರಿಗೆ ಕೆಲಸ ಜೊತೆ ಗ್ರಾಮದ ಅಭಿವೃದ್ಧಿ ಗೆ ಅವರ ಸಹಕಾರ ನನಗೆ ಸಂತೋಷ ನೀಡಿದೆ.
ಗ್ರಾಮದ ಅಭಿವೃದ್ಧಿ ಯಲ್ಲಿ ಯುವಕರು ಸೇರಿ ಕೊಂಡಾಗ ಉತ್ತಮ ಬೆಳವಣಿಗೆ ಎಂದು ಹರೀಶ್ ಶೆಟ್ಟಿ ಪಾಣೂರು ಅವರು ಹೇಳಿದ್ದಾರೆ