ಬಂಟ್ವಾಳ: ಬಿಸಿರೋಡು ಕೈಕುಂಜೆ ರಸ್ತೆಯಲ್ಲಿ ಯೇ ವಾಹನಗಳ ಪಾರ್ಕಿಂಗ್ ಸಂಚಾರಕ್ಕೆ ಅಡೆತಡೆ , ಕಾಮಗಾರಿಗೂ ಅಡ್ಡಿ ಎಂದು ವರದಿ ಪ್ರಕಟಿಸಿದ ಮರುದಿನ ಬಂಟ್ಚಾಳ ಟ್ರಾಫಿಕ್ ಎಸ್.ಐ. ರಾಜೇಶ್ ನೇತ್ರತ್ವದ ತಂಡ ಕಾರ್ಯಚರಣೆಗೆ ಇಳಿದಿದೆ.
ಬೆಳಿಗ್ಗೆ ಟ್ರಾಫಿಕ್ ಎಸ್.ಐ. ರಾಜೇಶ್ ಅವರು ಪೋಲೀಸ್ ವಾಹನದ ಮೈಕ್ ಮೂಲಕ ರಸ್ತೆಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸಬೇಡಿ ತೆರವುಮಾಡುವಂತೆ ಅನೌನ್ಸ್ ಮಾಡಿಕೊಂಡು ಹೋಗಿದ್ದಲ್ಲದೆ , ಜತೆಗೆ ಕೆಲವು ವಾಹನಗಳಿಗೆ ಲಾಕ್ ಹಾಕುವ ಕಾರ್ಯವನ್ನೂ ಮಾಡಿದ್ದಾರೆ.
ಬಿ.ಸಿ.ರೋಡಿನ ಕೈಕುಂಜೆ ರಸ್ತೆಯ ಪ್ರಾರಂಭದಿಂದ ತೋಟಗಾರಿಕೆ ಇಲಾಖೆ ಕಚೇರಿವರೆಗೆ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳ ನೋಂದಣಿ ಸಂಖ್ಯೆಯನ್ನು ಮೈಕ್ ಮೂಲಕ ಕರೆದು ತೆರೆವು ಮಾಡುವಂತೆ ಸೂಚನೆ ನೀಡಿದರು.
ಈ ವೇಳೆ ಬಹುತೇಕ ವಾಹನಗಳು ತೆರವುಗೊಂಡಿದೆ. ತೆರವುಗೊಳ್ಳದೇ ಇರುವ ವಾಹನಗಳಿಗೆ ಚಕ್ರಕ್ಕೆ ಲಾಕ್ ಹಾಕಿ ತೆರಳಿದ್ದಾರೆ.
ಬಿಸಿರೋಡಿನಿಂದ ಕೈಕುಂಜೆ ರಸ್ತೆಗೆ ಸೇರುವ ಆರಂಭದ ಭಾಗದವಾದ ಬಿಸಿರೋಡು ರಕ್ತೇಶ್ವರಿ ದೇವಸ್ಥಾನ ದ ಬಳಿಯಿಂದ ಕಾಂಕ್ರೀಟ್ ಕಾಮಗಾರಿ ನಡೆದು ರಸ್ತೆ ಅಗಲಗೊಂಡಿರುವುದರಿಂದ ಬಹುತೇಕ ವಾಹನಗಳು ರಸ್ತೆಯಲ್ಲೇ ನಿಲ್ಲಿಸಿ ಸವಾರರು ಹೋಗುತ್ತಿದ್ದು ಸಂಚಾರಕ್ಕೆ ಅಡಚಣೆ ಒಂದೆಡೆಯಾದರೆ , ಇನ್ನೊಂದೆಡೆ ಕಾಮಗಾರಿ ಗೂ ಅಡ್ಡಿಯಾಗುತ್ತಿದೆ.
ರಸ್ತೆಯ ಎರಡೂ ಬದಿಗಳಲ್ಲೂ ಇದೇ ರೀತಿ ಪಾಕಿಂಗ್ ಮಾಡುತ್ತಿರುವುದರ ಪರಿಣಾಮ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಇದೀಗ ಪೊಲೀಸ್ ಇಲಾಖೆಯು ಕಾರ್ಯಾಚರಣೆ ನಡೆಸಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ಕಾಮಗಾರಿ ಮುಗಿದಿದ್ದರೆ ಬಹಳಷ್ಟು ಪ್ರಯೋಜನ ವಾಗುತ್ತಿತ್ತು.
ಪ್ರಸ್ತುತ ಲಾಕ್ ಡೌನ್ ಸಡಿಲ ಗೊಂಡಿದ್ದು ಬಿಸಿರೋಡಿನಲ್ಲಿ ಬೆಳಿಗ್ಗೆ ನ ವೇಳೆ ಜನಜಂಗುಳಿ ಯ ಜೊತೆ ವಾಹನಗಳ ಸಾಲು ಸಾಲು ಕಾಮಗಾರಿಗೆ ತೊಂದರೆ ಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕಾಮಗಾರಿ ಮುಗಿಯವರೆಗೆ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸದಂತೆ ಮನವಿಯ ಜೊತೆ ಈ ರಸ್ತೆ ಅಭಿವೃದ್ಧಿಗೊಂಡಿರುವುದು ವಾಹಮಯಗಳ ಪಾರ್ಕ್ ಮಾಡಲು ಅಲ್ಲ ವಾಹನಗಳ ಸುಗಮ ಸಂಚಾರಕ್ಕೆ ಎಂಬುದನ್ನು ವಾಹನ ಸವಾರರು ತಿಳಿದು ಕೊಂಡರೆ ಉತ್ತಮ ಎಂಬ ಅಭಿಪ್ರಾಯ ಗಳು ವ್ಯಕ್ತವಾಗುತ್ತಿದೆ.