ಮಡಂತ್ಯಾರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಗೇರಕಟ್ಟೆ ಯಿಂದ ದಡ್ಡು ರಸ್ತೆಯ ಸ್ವಚ್ಛತಾ ಕಾರ್ಯ ಹಾಗೂ ಚರಂಡಿ ಕಾಮಗಾರಿ ಮಡಂತ್ಯಾರು ಗ್ರಾ. ಪಂಚಾಯತ್ ಸಹಕಾರದೊಂದಿಗೆ, ಗೌರವಾನ್ವಿತ ಅಧ್ಯಕ್ಷರಾದ ಶಶಿಪ್ರಭಾ ಉಪಾಧ್ಯಕ್ಷರಾದ ಸಂಗೀತಾ ಶೆಟ್ಟಿ ಹಾಗೂ ಒಂದನೇ ಮತ್ತು ಎರಡನೇ ವಾರ್ಡ್ ನ ಸದಸ್ಯರ ಕೂಡುವಿಕೆಯೊಂದಿಗೆ, ಗ್ರಾಮಸ್ಥರ ಶ್ರಮದಾನ ಹಾಗೂ ಪ್ರೋತ್ಸಾಹದೊಂದಿಗೆ ಯಶಸ್ವಿಯಾಗಿ ನಡೆಯಿತು.
ವೀಕೆಂಡ್ ಕರ್ಫ್ಯೂನ ಸಮಯವನ್ನು ಸದ್ಬಳಕೆ ಮಾಡಿಕೊಂಡ ಆ ಭಾಗದ ಗ್ರಾಮಸ್ಥರು ಪ್ರತಿ ಮನೆಯಿಂದ ಪ್ರತಿ ಸದಸ್ಯರು ಉತ್ಸಾಹದಿಂದ ಭಾಗವಹಿಸುವುದರೊಂದಿಗೆ ಒಂದನೇ ವಾರ್ಡ್ ನ ಸದಸ್ಯರಾದ ಕಿಶೋರ್ ಕುಮಾರ್ ಶೆಟ್ಟಿ, ಮೂಡಾಯೂರು ಇವರ ಮುಂದಾಳತ್ವದಲ್ಲಿ ಶ್ರೀ ಗೋಪಾಲಕೃಷ್ಣ ಕೆ. ಮತ್ತು ರೂಪಾ ನವೀನ್ ಹಾಗೂ ಎರಡನೇ ವಾರ್ಡ್ ನ ಸದಸ್ಯರಾದ ವಿಶ್ವನಾಥ ಪೂಜಾರಿ ಹಾರಬೆ, ಬಿಜೆಪಿ ಒಂದನೇ ವಾರ್ಡ್ ನ ಅಧ್ಯಕ್ಷರಾದ ನವೀನ್ ಕುಮಾರ್ ಕೋಡ್ಲಕ್ಕೆ ಇವರ ಪ್ರೋತ್ಸಾಹದೊಂದಿಗೆ ಯಶಸ್ವಿಗೊಳಿಸಿದರು.