ಬೆಂಗಳೂರು: ಬಿಪಿಎಲ್ ಕಾರ್ಡ್ ದಾರರಾಗಿದ್ದು, ಕೋವಿಡ್ ಸೊಂಕಿನಿಂದ ದುಡಿಯುವ ವ್ಯಕ್ತಿಗಳು ಮೃತಪಟ್ಟರೆ ಅಂತಹ ವ್ಯಕ್ತಿಗಳ ಕುಟುಂಬಕ್ಕೆ ರಾಜ್ಯ ಸರಕಾರ ಒಂದು ಲಕ್ಷ ರೂ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಈ ಘೋಷಣೆ ಮಾಡಿದ ಪ್ರಥಮರಾಜ್ಯ ಕರ್ನಾಟಕ ವಾಗಿದ್ದು ಮುಖ್ಯ ಮಂತ್ರಿಯವರು ಮಾಧ್ಯಮ ದವರಿಗೆ ಈ ವಿಷಯ ತಿಳಿಸಿದ್ದಾರೆ.
ಕೋವಿಡ್ ಸೊಂಕಿನಿಂದ ದುಡಿಯುವ ವ್ಯಕ್ತಿಳು ಮೃತಪಟ್ಟು ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ.
ಇದನ್ನು ಮನಗಂಡು ಬಿ.ಪಿ.ಎಲ್. ಕುಟುಂಬಗಳಲ್ಲಿ ಕೋವಿಡ್ ಸೊಂಕಿನಿಂದ ವಯಸ್ಕರು ಮೃತಪಟ್ಟಲ್ಲಿ ಅ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ ನೀಡಲು ತೀರ್ಮಾನಿಸಲಾಗಿದೆ.ಕುಟುಂಬಕ್ಕೆ ಒಬ್ಬ ವ್ಯಕ್ತಿ ಯ ಮರಣಕ್ಕೆ ಪರಿಹಾರ ವಿತರಿಸಲಾಗುವುದು ಎಂಬುದನ್ನು ಅವರು ಟ್ವಿಟರ್ ಮೂಲಕವೂ ತಿಳಿಸಿದ್ದಾರೆ.