ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಶ್ರೀನಿವಾಸ ಶಿಕ್ಷಣ ಮಹಾವಿದ್ಯಾಲಯವು ಪ್ರಥಮ ವರ್ಷದ ಬಿಎಡ್ ಪ್ರಶಿಕ್ಷಣಾರ್ಥಿಗಳಿಗೆ ವಿಶ್ವಪರಿಸರ ದಿನದ ಅಂಗವಾಗಿ “ಸುಸ್ಥಿರ ಪರಿಸರವನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ” ಎನ್ನುವ ವಿಚಾರದ ಕುರಿತಾಗಿ ವಿಚಾರಗೋಷ್ಠಿಯನ್ನು ಸಾಮಾಜಿಕ ಜಾಲತಾಣದ ಮೂಲಕ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ತೆಲಂಗಾಣ ರಾಜ್ಯದ ನರಗುಂದದ ಇಎಂಟಿಸಿ ಡಯಟ್ ಪ್ರಾಚಾರ್ಯರಾದ ನರೇಂದ್ರ ರೆಡ್ಡಿ ಕಂಡಿಮಲ್ಲ ರವರು ಭಾಗವಹಿಸಿದ್ದರು. ಪರಿಸರ ದಿನಾಚರಣೆಯ ಅಂಗವಾಗಿ ಸುಸ್ಥಿರ ಪರಿಸರವನ್ನು ಕಾಪಾಡುವಲ್ಲಿ ಶಿಕ್ಷಕರು ಯಾವ ರೀತಿಯಲ್ಲಿ ಪ್ರೇರಣೆಯಾಗಬಹುದು ಎನ್ನುವ ವಿಚಾರವನ್ನು ಶ್ರೀಯುತ ಕಂಡಿಮಲ್ಲರವರು ವಿದ್ಯಾರ್ಥಿಗಳಿಗೆ ಬೋಧಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಪರಿಸರ ದಿನದ ಅಂಗವಾಗಿ ಗಿಡನೆಟ್ಟು ಫೋಟೋ ತೆಗೆದು ಕಳುಹಿಸುವ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಶ್ರೀನಿವಾಸ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಯಶ್ರೀ ಕೆ. ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಪದ್ಮನಾಭ ಸಿ.ಹೆಚ್. ಕಾರ್ಯಕ್ರಮ ಸಂಯೋಜಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು.