ಬಂಟ್ವಾಳ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವಕ್ಕೆ ಯಾವುದೇ ಕೊರತೆಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿಕೆ ನೀಡಿದ್ದಾರೆ.
ಅವರು ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ದವರ ಜೊತೆ ಮಾತನಾಡಿದ ವೇಳೆ ತಿಳಿಸಿದ್ದಾರೆ.
ಕೋವಿಡ್ ಸಂಕಷ್ಟದ ಸಮಯ ದಲ್ಲಿ ಪಕ್ಷದ ಎಲ್ಲಾ ಶಾಸಕರಿಗೆ ರಾಜಕೀಯ ಹೇಳಿಕೆಗಳನ್ನು ನೀಡದಂತೆ ತಿಳಿಸಲಾಗಿದೆ.
ಸಚಿವರು ಹಾಗೂ ಶಾಸಕರು
ಅಯಾಯ ಕ್ಷೇತ್ರದಲ್ಲಿ ನಿಂತು ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಕೈಗೊಳ್ಳಿ ಎಂದು ಸೂಚಿಸಲಾಗಿದೆ.
ಸೇವಾ ಕಾರ್ಯದ ಮೂಲಕ ಜನರ ಸೇವೆ ಮಾಡಲು ಜನಾಶ್ರೀವಾದ ಮಾಡಿದ್ದು ಜನರ ಸಮಸ್ಯೆ ಗಳಿಗೆ ಪೂರಕ ಕಾರ್ಯಗಳನ್ನು ಕೈಗೊಳ್ಳಲು ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ಜಿ.ಪಂ.ಮತ್ತು ತಾಲೂಕು ಪಂಚಾಯತ್ ಚುನಾವಣಾ ದೃಷ್ಟಿಯಿಂದ ಪಕ್ಷದ ಆಂತರಿಕ ಸಭೆ ನಡೆಸಲಾಗಿದ್ದು ಕೊರೊನಾ ಲಾಕ್ ಡೌನ್ ಕೊನೆಗೊಂಡು ಜನಜೀವನ ಸಹಜ ಸ್ಥಿತಿಗೆ ಬಂದ ಬಳಿಕ ಪಕ್ಷ ಸಂಘಟನೆಗಾಗಿ ಜನಸೇವಕ ಯಾತ್ರೆ ಮಾದರಿಯಲ್ಲಿ ಹೊಸ ಪರಿಕಲ್ಪನೆಯನ್ನು ಮಾಡುತ್ತೇವೆ ಎಂದರು.
ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮುಖ್ಯ ಮಂತ್ರಿ ವಿವೇಚನೆ ಗೆ ಬಿಟ್ಟದ್ದು , ಅದನ್ನು ಅವರಿಗೆ ಬಿಟ್ಟದ್ದು ಅದನ್ನು ಅವರೇ ನೋಡಿಕೋಳ್ಳುತ್ತಾರೆ.