ಬಂಟ್ವಾಳ: ಭಾರತ ದೇಶ ಕೊರೊನಾ ಸೊಂಕು ಪ್ರಕರಣ ದಲ್ಲಿ ನಂ.೧ ಸ್ಥಾನ ಪಡೆದಿದೆ, ಇದು ಭಾರತ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪ ಮಾಡಿದ್ದಾರೆ.
ಅವರು ಬಿಸಿರೋಡಿನ ರಂಗೋಲಿ ಹೋಟೆಲ್ ನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತ್ರತ್ವದಲ್ಲಿ ಕೊರೊನಾ ಸೊಂಕಿತರ ಕುಟುಂಬಕ್ಕೆ ನೀಡುವ ಯೋಜನೆ ಯಾದ ಇಂದಿರಾ ಕ್ಷೇಮ ನಿಧಿ ಯೋಜನೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಸರಕಾರ ಕೋವಿಡ್ ನಿರ್ವಹಣೆ ಯಲ್ಲಿ ಸಂಪೂರ್ಣ ವಿಫಲವಾಗಿದ್ದು,
ದೇಶದ ಜನತೆ ಕೊರೊನಾ ಸಂಕಷ್ಟದಲ್ಲಿ ಒದ್ದಾಡುವುದಕ್ಕೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷವೇ ಕಾರಣವಾಗಿದ್ದು ಇದರ ನೇರ ಹೊಣೆ ಹೊರಬೇಕಾಗಿದೆ ಎಂದು ಅವರು ಹೇಳಿದರು.

ಅವೈಜ್ಞಾನಿಕ ಲಾಕ್ ಡೌನ್ ಮೂಲಕ ಜನರನ್ನು ಸಂಕಷ್ಟ ಕ್ಕೆ ದೂಡಿದೆ.
ಎರಡನೆಯ
ಕೊರೊನಾ ಅಲೆ ನಿಯಂತ್ರಣ ಕ್ಕೆ ಬಂದಿದ್ದರೆ ಅದು ಜನರ ಸ್ವಯಂಪ್ರೇರಿತ ಜವಬ್ದಾರಿ ಮತ್ತು ಜಾಗರೂಕತೆಯಿಂದ ಮಾತ್ರ ಸಾಧ್ಯವಾಯಿತು , ಮತ್ತು ಭಾರತೀಯ ರ ಹ್ಯುಮಿನಿಟಿ ಪವರ್ ನಿಂದ ಎಂದು ಹೇಳಿದರು.
ಬಂಟ್ವಾಳ ತಾಲೂಕಿನಲ್ಲಿ
ಕೊರೊನಾ ಸೊಂಕಿಗೆ ತುತ್ತಾಗಿದ್ದ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ರಮಾನಾಥ ರೈ ಅವರ ನೇತ್ರತ್ವದಲ್ಲಿ ಇಂದಿರಾ ಕ್ಷೇಮ ನಿಧಿ ಎಂಬ ಯೋಜನೆ ಕಾರ್ಯರೂಪಕ್ಕೆ ತಂದಿರುವ ದು ಸಂತಸ ತಂದಿದೆ ಎಂದು ಅವರು ಹೇಳಿದರು.

ಎರಡನೇ ಅಲೆಯ ಬರುತ್ತದೆ ಎಂಬ ಮುನ್ಸೂಚನೆ ಯನ್ನು ತಜ್ಞರು ನೀಡಿದ್ದರೂ ಕೂಡ ಯಾವುದೇ ಮುಂಜಾಗ್ರತೆಯನ್ನು ಮಾಡದೆ ಸರಕಾರ ಜನತೆಯನ್ನು ಸಂಕಷ್ಟ ಕ್ಕೆ ದೂಡಿದೆ ಎಂದು ಆರೋಪಿಸಿದರು.
ಕೊರೊನಾ ಸಂಕಷ್ಟದಲ್ಲಿ ಕಾಂಗ್ರೇಸ್ ದೇಶದ್ಯಾಂತ ನೆರವಿಗೆ ಬಂದಿದೆ .
ಕಾಂಗ್ರೇಸ್ ವತಿಯಿಂದ ಜಿಲ್ಲೆಯಲ್ಲಿ 13 ಉಚಿತ ಅಂಬ್ಯುಲೆನ್ಸ್ ಗಳು ಸೇವೆ ನೀಡುತ್ತಿವೆ .
ಜವಬ್ದಾರಿ ಯುತ ವಿರೋಧ ಪಕ್ಷವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೊರೊನಾ ನಿಯಂತ್ರಣ ಕೇವಲ ವ್ಯಾಕ್ಸಿನೇಷನ್‌ ನಿಂದ ಮಾತ್ರ ಸಾಧ್ಯ ಎಂದು ಗೊತ್ತಿದ್ದರು ಕೂಡ ಪ್ರಸ್ತುತ ಕನಿಷ್ಠ
ಕೊರೊನಾ ವಾರಿಯರ್ಸ್‌ ಗಳಿಗೆ
ವ್ಯಾಕ್ಸಿನೇಷನ್‌ ಹಂಚಿಕೆ ಯಾಗಿಲ್ಲ , ಕೇವಲ ಪ್ರಚಾರಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಸರಕಾರ ಘೋಷಣೆ ಮಾಡಿದ ಪ್ಯಾಕೇಜ್ ಇನ್ನು ಕೂಡ ಜನರಿಗೆ ನೀಡದ ಸರಕಾರ ಈ ಬಾರಿ ಘೋಷಣೆ ಮಾಡುವ ಪ್ಯಾಕೇಜ್ ಸಿಗಬಹುದೇ.
ಈ ಬಾರಿಯ ಪ್ಯಾಕೇಜ್ ನಿಷ್ಪ್ರಯೋಜಕ ಪ್ಯಾಕೇಜ್ ಎಂದು ಆರೋಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ , ಜಿ.ಪಂ.ಸದಸ್ಯ ರಾದ ಪದ್ಮಶೇಖರ್ ಜೈನ್ , ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಭೂಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿಕುಂದರ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here