ಕೇಂದ್ರ ಮತ್ತು ರಾಜ್ಯ ಸರ್ಕಾರ ,ಮತ್ತು ಜಿಲ್ಲಾ ಪಂಚಾಯತ್ ನೂತನವಾಗಿ ಜಾರಿಗೆ ತಂದ ಜಲಜೀವನ್ ಮಿಷನ್,ಯೋಜನೆ ಕಾಮಗಾರಿಗೆ ಮಾಣಿಯಲ್ಲಿ ಗುದ್ದಲಿ ಪೂಜೆ.
ಗುದ್ದಲಿ ಪೂಜೆ ನಡೆಸಿ ಮಾತನಾಡಿದ
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಅವರು
ಪ್ರತೀ ಮನೆಗೆ ನೀರು ಯೋಜನೆಯಿಂದ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ದೂರವಾಗಲಿದೆ. ಮಾಣಿ ಗ್ರಾಮದಲ್ಲಿ ಇದನ್ನು ಸಮರ್ಪಕವಾಗಿ ರೂಪಿಸಲಾಗುವುದು ಎಂದು ಅವರು ಹೇಳಿದರು.
ಅವರು ಮಾಣಿ ಗ್ರಾಮಕ್ಕೆ ಮಂಜೂರಾದ 62 ಲಕ್ಷ ರೂಪಾಯಿ ಮೊತ್ತದ ಜಲಜೀವನ್ ಮಿಷನ್ ಯೋಜನೆಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಕೋವಿಡ್ ನಿಯಮಾನುಸಾರ ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ನಾರಾಯಣ ಶೆಟ್ಟಿ ತೋಟ, ಸೀತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಗಟ್ಟಿ, ಗುತ್ತಿಗೆದಾರರಾದ ಅರುಣ್ ಕುಮಾರ್, ಮೇಲ್ವಿಚಾರಕರಾದ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.