ಬಂಟ್ವಾಳ: ಲಾಕ್ ಡೌನ್ ಅವಧಿಯಲ್ಲಿ ಕರ್ತವ್ಯ ನಿರತ ಪೋಲೀಸರಿಗೆ ಚಹಾ ತಿಂಡಿಯ ಸಮಸ್ಯೆ ಯಾಗಬಾರದೆಂದು ಎಂಬ ನಿಟ್ಟಿನಲ್ಲಿ ಬಂಟ್ವಾಳದ ತಂಡವೊಂದು ಕಳೆದ 50 ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಉಪಹಾರದ ವ್ಯವಸ್ಥೆ ಮಾಡಿ ಪೋಲಿಸ್ ಇಲಾಖೆಯಿಂದ ಅಭಿನಂದನೆ ಗೆ ಪಾತ್ರವಾಗಿದೆ.
ಬಂಟ್ವಾಳನಗರ. ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ಸಂಚಾರ ಪೋಲೀಸ್ ಠಾಣೆ ಮತ್ತು ಬಂಟ್ವಾಳವ್ರತ್ತ ನಿರೀಕ್ಷಕರ ಕಚೇರಿ ಮತ್ತು ಪೊಲೀಸಗ ಉಪಾಧೀಕ್ಷಕರ ಕಚೇರಿಯ ಅದಿಕಾರಿ/ ಸಿಬ್ಬಂದಿಗಳಿಗೆ ಲಾಕ್ಡೌನ್ ಸಮಯದಲ್ಲಿ ಸಂಜೆ ಹೊತ್ತಿನ ಚಾ ಹಾಗೂ ಉಪಹಾರ ದ ವ್ಯವಸ್ಥೆ ಯನ್ನು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದಲ್ಲಿ ಗಿರೀಶ್ ಪೈ ನೇತ್ರತ್ವದ ತಂಡ
ಕಳೆದ 50 ದಿನ ಶುಚಿಯಾಗಿ ರುಚಿಯಾಗಿ ತಯಾರಿಸಿ ಕೊಟ್ಟಿರುತ್ತಾರೆ.ಅವರಿಗೆ ಅಬಿವಂದನೆಗಳನ್ನು ಪೋಲೀಸ್ ಇಲಾಖೆ ತಿಳಿಸಿದೆ.