ಬಂಟ್ವಾಳ: ಸರಕಾರದ ನಿಷೇಧಾಜ್ಞೆ ಹಾಗೂ ಕೋವಿಡ್ 19 ನ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿ ಅಂಗಡಿಯನ್ನು ತೆರೆದು ಜನ ಸೇರಿಸಿ ವ್ಯಾಪಾರ ಮಾಡುತ್ತಿದ್ದ ಮಾಲಕನ ಮೇಲೆ ನಗರ ಪೋಲೀಸ್ ಠಾಣಾ ಎಸ್.ಐ. ಅವಿನಾಶ ಹೆಚ್ ಗೌಡ ಅವರು ಪ್ರಕರಣ ದಾಖಲಿಸಿದ್ದಾರೆ.
ಮೂಡಾ ಗ್ರಾಮದ ಪರ್ಲಿಯಾ ನಿವಾಸಿ ಶೇಕ್ ಝಹೀರ್ ಅವರ ಮಾಲಕತ್ವದ ಮೂಡ ಗ್ರಾಮದ ಬಿ ಸಿ ರೋಡ್ ನ ಹೆರ್ಮಾನ್ ಕಾಂಪ್ಲೆಕ್ಸ್ ನಲ್ಲಿರುವ ಟ್ರನ್ಜ್ ಚಪ್ಪಲಿ ಅಂಗಡಿಯನ್ನು ತೆರದು ಜನ ಸೇರಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ರು.
ಕೋವಿಡ್ 19 ವೈರಸ್ ನ ಬಗ್ಗೆ ಜಿಲ್ಲಾಡಳಿತ ಹೊರಡಿಸಿದ ಕರ್ಪ್ಯೂವನ್ನು , ಸರಕಾರಿ ಆದೇಶವನ್ನು ಧಿಕ್ಕರಿಸಿ ಅಂಗಡಿಯನ್ನು ತೆರೆದು ಸಾಮಾಜಿಕ ಅಂತರವನ್ನು ಕಾಪಾಡದೇ ಸರಕಾರವು ಕೋವಿಡ್ -19 ನಿಯಂತ್ರಣದ ಬಗ್ಗೆ ಹೊರಡಿಸಿದ ಮಾರ್ಗ ಸೂಚಿಯನ್ನು ಪಾಲಿಸದೇ ಉದ್ದೇಶಪೂರ್ವಕವಾಗಿ ಗಿರಾಕಿಗಳನ್ನು ಸೇರಿಸಿ ವ್ಯಾಪಾರವನ್ನು ಮಾಡುತ್ತಾ ಹಾಗೂ ನಿಯಾಮಾಳಿಯಂತೆ ಅಂಗಡಿಯನ್ನು ಮುಚ್ಚದೇ ವ್ಯಾಪಾರ ಮಾಡುತ್ತಿದ್ದರು.
ಅಂಗಡಿ ಮಾಲಿಕ ಶೇಖ್ ಜಹೀರ್ ನು ಜನರನ್ನು ಗುಂಪು ಸೇರಿಸಿಕೊಂಡು ಮನುಷ್ಯರ ಜೀವಕ್ಕೆ ಅಪಾಯಕಾರಿಯಾದ ಕರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಸರಕಾರ ವಿಧಿಸಿದ್ದ ನಿಷೇದಾಜ್ಷೆ ಜ್ಯಾರಿಯಲ್ಲಿರುವುದನ್ನು ಉಲ್ಲಂಘಿಸಿ ಹಾಗೂ ಮಾರಕ ಸಾಂಕ್ರಮಿಕ ರೋಗವಾದ ಕರೋನಾ ವೈರಸ್ ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡ ಉದ್ದೇಶ ಪೂರ್ವಕವಾಗಿ ನಿಷೇದಾಜ್ಷೆಯನ್ನುಉಲ್ಲಂಘನೆ ಮಾಡಿ ಚಪ್ಪಲಿ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸಿ ಅಪರಾಧವೆಸಗಿದ್ದಾರೆ ಎಂದು ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.