Thursday, October 19, 2023

ಲಾಕ್ಡೌನ್ ನಿಯಮ ‌ ಇನ್ನಷ್ಟು ಬಿಗಿ : ಡಿ.ಸಿ ರಾಜೇಂದ್ರ ಕೆ.ವಿ

Must read

ಮಂಗಳೂರು : ಕೊರೋನಾದ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್ ಡೌನ್ ಕೋವಿಡ್ ನಿಯಮ ನಿಯಮಗಳು ಇನ್ನಷ್ಟು

ಬಿಗಿಗೊಳ್ಳಲಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ತಿಳಿಸಿದ್ದಾರೆ.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ , ಜಿಲ್ಲೆಯಲ್ಲಿ ಪ್ರತಿ ದಿನ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಾಕ್ ಡೌನ್ ನ ಸಂದರ್ಭ ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ನಿರ್ಣಯ ಮಾಡಲಾಗಿದೆ ಎಂದು

ಇದಕ್ಕಾಗಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹತ್ತು ಪ್ಲೈಂಗ್ ಸ್ಕಾಡ್ ರಚನೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಿನ ಕ್ರಮ ವಹಿಸಲಾಗಿದೆ. ಮುಂಜಾನೆ ಅಗತ್ಯ ಸೇವೆ ಸಂಧರ್ಭದಲ್ಲೂ ಕೊವಿಡ್ ನಿಯಮ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೊರೋನ ಲಾಕ್ ಡೌನ್ ವೇಳೆ ಜನರು ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಮುಂಜಾನೆ 6 ರಿಂದ 10 ರವರೆಗೆ ಅಗತ್ಯ ಸೇವೆಗೆ ಅವಕಾಶ ಕೊಡಲಾಗಿದೆ. ಈ ವೇಳೆ ನಾಗರಿಕರು ಅನಗತ್ಯ ಸಂಚಾರ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ, ಜಿಲ್ಲೆಯ ಪೋಲಿಸ್ ಚೆಕ್ ಪೊಸ್ಟ್ ಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಜನರು ಈ ಲಾಕ್ ಡೌನ್ ಗೆ ಸಹಕಾರ ಹೆಚ್ಚಾಗಿ ನೀಡಬೇಕಾಗಿದೆ. ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಆಗದಿದ್ದಲ್ಲಿ ರಾಜ್ಯದ ಗೈಡ್ ಪಾಲನೆಯೊಂದಿಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 7550 ಕೊರೋನಾ ಸಕ್ರಿಯ ಪ್ರಕರಣಗಳಿವೆ. ಆಸ್ಪತ್ರೆಯಲ್ಲಿ ಒಟ್ಟು 1119 ಮಂದಿ ಚಿಕಿತ್ಸೆಯಲ್ಲಿ ಇದ್ದಾರೆ. 6003 ಮಂದಿ ಹೋಂ ಐಷೋಲೇಶನ್ ನಲ್ಲಿದ್ದಾರೆ. ಕೋವಿಡ್ ಕೇರ್ ಸೆಂಟರ್ ಗಳಲ್ಲಿ 428 ಮಂದಿ ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 120 ಕಂಟೈನ್ಮೇಂಟ್ ಜೋನ್ ಗಳಿವೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಗಳಿವೆ. ಜಿಲ್ಲೆಯಲ್ಲಿ ಒಟ್ಟು 91% ಸೋಂಕಿತರು ಗುಣಮುಖಹೊಂದುತ್ತಿದ್ದಾರೆ. ಜಿಲ್ಲೆಯ ಕೋವಿಡ್ ಸಾವಿನ ಪ್ರಮಾಣ 1.19% ಆಗಿದೆ. ಜಿಲ್ಲೆಯಲ್ಲಿ ಕೋವಿಡ್ ಗೆ ಒಟ್ಟು 950 ಸಾವು ಸಂಭವಿಸಿದೆ, ಇದರಲ್ಲಿ ಎರಡನೇ ಅಲೆ ವೇಳೆ 210 ಸಾವು ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಂಡಿಸ್ವೀರ್ ಇಂಜೆಕ್ಷನ್ ನ ಯಾವುದೇ ಸಮಸ್ಯೆ ಇಲ್ಲವಾಗಿದೆ. ಜಿಲ್ಲೆಯಲ್ಲಿ ಈಗ ಒಟ್ಟು 15 ರಿಂದ 16 ಆಕ್ಸಿಜನ್ ಉತ್ಪಾದನಾ ಪ್ಲಾಂಟ್ ಗಳಿವೆ. ಜಿಲ್ಲೆಯಲ್ಲಿ 1125 ಸಿಲಿಂಡರ್ ಗಳಷ್ಟು ಆಕ್ಸಿಜನ್ ಆಸ್ಪತ್ರೆಯಲ್ಲಿ ಪ್ರೊಡಕ್ಷನ್ಸ್ ಆಗುತ್ತಿದೆ. 8 ಮೆಟ್ರಿಕ್ ಟನ್ ನಷ್ಟು ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ. ಜಿಲ್ಲೆಗೆ ಅಗತ್ಯವಿರುವ 20 ಮೆಟ್ರಿಕ್ ಟನ್ ಗಳ ಪೈಕಿ 8 ಮೆಟ್ರಿಕ್ ಟನ್ ಆಸ್ಪತ್ರೆಯಲ್ಲೇ ಉತ್ಪಾದನೆ ಆಗುತ್ತಿವೆ.

ಇವೆಲ್ಲವೂ ಕೊರೊನಾ ಮೂರನೇ ಅಲೆಯ ನಿಯಂತ್ರಣದ ಹಿನ್ನಲೆಯಲ್ಲಿ ಜಿಲ್ಲಾಡಳಿತ ತೆಗೆದುಕೊಂಡ ಕ್ರಮವಾಗಿದೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ಈಗಾಗಲೇ ಸಂಭಂದಪಟ್ಟ ಅಧಿಕಾರಿಗಳ, ಮಕ್ಕಳ ತಜ್ಙರ ತಂಡದ ಸಭೆ ನಡೆಸಲಾಗಿದೆ. ಇನ್ನೂ ಮಕ್ಕಳಲ್ಲಿ ಮಲ್ಟಿ ಸಿಸ್ಟಮ್ ಇನ್ಪಮೆಟ್ರಿ ಡಿಸೋಡರ್ಸ್(ಮಿಸ್ಸಿ) ಕಾಯಿಲೆಗಳು ಕಂಡುಬರುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಒಟ್ಟು 7 ಮಿಸ್ಸಿ ಕಾಯಿಲೆ ಪ್ರಕರಣ ಬೆಳಕಿಗೆ ಬಂದಿದ್ದು ಯಾವುದೇ ಸಾವು ಸಂಭವಿಸಿಲ್ಲ. ಸ್ಟಿ ರಾಯ್ಡ್ಸ್ ಗಳಲ್ಲಿ ಈ ಕಾಯಿಲೆಗಳು ಗುಣಮುಖವಾಗಿವೆ. ಮತ್ತು ಜಿಲ್ಲೆಯ ಕೋವಿಡ್ ಬೆಡ್ ಮ್ಯಾನೇಜ್ಮೆಂಟ್ ಗಾಗಿ ಸಾಫ್ಟ್ ವೇರ್ ಬಳಕೆ ಮಾಡಲಾಗ್ತಾಯಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾಹಿತಿಯನ್ನು ನೀಡಿದ್ದಾರೆ.

More articles

Latest article