ಕುಪ್ಪೆಪದವು ಆರೋಗ್ಯ ಕೇಂದ್ರದಲ್ಲಿ *ವೈದ್ಯರ ನಡೆ – ಹಳ್ಳಿ ಕಡೆ* ಕಾರ್ಯಕ್ರಮವನ್ನು *ಮಾನ್ಯ ಡಾ|| ವೈ ಭರತ್ ಶೆಟ್ಟಿ* ರವರು ಉದ್ಘಾಟಿಸಿದರು.
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿಯವರು* ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ *”ವೈದ್ಯರ ನಡೆ – ಹಳ್ಳಿ ಕಡೆ”* ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು . ಆರೋಗ್ಯ ಕೇಂದ್ರಕ್ಕೆ ಬಾಡಿಗೆ ಆಧಾರದಲ್ಲಿ ವಾಹನ ಒದಗಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕರು ಕೊರೊನ ನಿಯಂತ್ರಣಕ್ಕೆ ನಾವೆಲ್ಲರೂ ಹೋರಾಡಬೇಕು ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮುಡಿಸುವಂತಹ ಕಾರ್ಯವನ್ನು ಕೈಗೊಳ್ಳಬೇಕೆಂದು ವಿನಂತಿಸಿದರು. ಇದೆ ವೇಳೆ ವೈದ್ಯರಿಗೆ ಆರೋಗ್ಯ ಸಹಾಯಕ , ಸಹಾಯಕಿಯರಿಗೆ ,ಆಶಾ ಕಾರ್ಯಕರ್ತರಿಗೆ , ಅಂಗನವಾಡಿ ಹಾಗೂ ವಿವಿಧ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುತ್ತೂರು ಹಾಗೂ ಕುಪ್ಪೆಪದವು ಪಂಚಾಯತ್ ನ ಅಧ್ಯಕ್ಷರು , ಉಪಾಧ್ಯಕ್ಷರು , ಸದಸ್ಯರುಗಳು , ಪಂಚಾಯತ್ ಮಟ್ಟದ ಕಾರ್ಯಪಡೆ ಸಮಿತಿ ಸದಸ್ಯರು , ಮಂಗಳೂರು ತಹಶೀಲ್ದಾರರು , ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು , ಗ್ರಾಮ ಕರಣಿಕರು , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು , ಗಂಜಿಮಠ ಆರೋಗ್ಯ ಕೇಂದ್ರದ ವೈದ್ಯರು , ಬಜ್ಪೆ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಇನ್ನಿತರು ಉಪಸ್ಥಿತರಿದ್ದರು .