ಬಂಟ್ವಾಳ, ಜೂ. 25: ಉಡುಪಿ ಕಲಾರಂಗದ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಸರೋಜಿನಿ ದಾಮೋದರನ್ ಫೌಂಡೇಶನ್ ನವರಿಂದ ಬಂಟ್ವಾಳ ತಾಲೂಕಿನ ಸಂಕಷ್ಟದಲ್ಲಿರುವ ಆಯ್ದ ಯಕ್ಷಗಾನ ಕಲಾವಿದರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಹಲವು ಕ್ಷೇತ್ರಗಳು ಕೊರೊನಾದಿಂದ ನಲುಗಿ ಹೋಗಿದ್ದು, ಯಕ್ಷಗಾನ ಕಲಾವಿದರು ಕೂಡ ಸಂಕಷ್ಟಕ್ಕೆ ಸಿಲುಕಿದೆ. ಸರಕಾರ ಕೂಡ ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಮಾಡಿದೆ. ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಶಾಸಕರ ಮೂಲಕ ಪ್ರಯತ್ನ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ಹೋಟೆಲ್ ರಂಗೋಲಿ ಮಾಲಕ ಸದಾನಂದ ಶೆಟ್ಟಿ, ಕಾಸರಗೋಡು ಪಾರ್ತಿಸುಬ್ಬ ಯಕ್ಷಗಾನ ಕಲಾಕೇಂದ್ರದ ಸದಸ್ಯರಾದ ಭಾಗವತ ರಾಮಕೃಷ್ಣ ಮಯ್ಯ, ಸತೀಶ್ ಅಡಪ ಉಪಸ್ಥಿತರಿದ್ದರು.
ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ಪ್ರಸ್ತಾವನೆಗೈದರು. ಕಲಾವಿದ ರಮೇಶ್ ಕುಲಶೇಖರ ವಂದಿಸಿದರು.