ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗಾನ ಕಲಾವಿದರಿಗೆ ಇಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಅವರು ಕಿಟ್ ವಿತರಣೆಗೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಚಾಲನೆ ನೀಡಿ, ಪಟ್ಲ ಸತೀಶ್ ಶೆಟ್ಟಿಯವರ ಹಾಗೂ ಪಟ್ಲ ಫೌಂಡೇಶನ್ ಇದರ ಸಮಾಜಮುಖಿ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.
ಈ ಸಭೆಯಲ್ಲಿ ಕ್ಷೇತ್ರದ ಅರ್ಚಕರಾದ ಆದರ್ಶ್ ಭಟ್ ಪೊಳಲಿ , ಬರೋಡ ಬ್ಯಾಂಕ್ನ ಪ್ರಬಂಧಕರದ ಪುನೀತ್ ಶೆಟ್ಟಿ, ವೆಂಕಟೇಶ್ ನಾವಡ ಪೊಳಲಿ, ನಾಗೇಶ್ ರಾವ್ ಅಮ್ಮುoಜೆ, ಪೊಳಲಿ ಘಟಕದ ಎಲ್ಲಾ ಸದಸ್ಯರು ಹಾಜರಿದ್ದರು. ಮಾಧವ ಕೊಳತ್ತಮಜಲು ಕಾರ್ಯಕ್ರಮ ನಿರೂಪಿಸಿದರು