*ಕೋವಿಡ್-19 ಎರಡನೇ ಅಲೆಯ ಕಠಿಣ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದಿರಾ ಕ್ಷೇಮ ನಿಧಿಯ ವತಿಯಿಂದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರ ಮುಂದಾಳತ್ವದಲ್ಲಿ, ಕೋವಿಡ್ ಪಾಸಿಟಿವ್ ಬಂದ ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ನೀಡುವ ವಿಶೇಷ ಕಾರ್ಯಕ್ರಮ ಚೆನ್ನೈತೋಡಿ ಗ್ರಾಮದಲ್ಲಿ ನಡೆಯಿತು*.
*ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಚೆನ್ನೈತೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ರಾಜೇಂದ್ರ, ಉಪಾಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ, ಸದಸ್ಯರಾದ ರಮಾನಂದ ಸಪಲ್ಯ ಬೆದ್ರಕಾಡು, ಆನಂದ ಆಚಾರ್ಯ ಹರ್ಕಾಡಿ ,ನಾಗೇಶ್, ಲಿತೇಶ್ ಮಾಜಿ ಸದಸ್ಯರಾದ ಅನಂತ ಪೈ,ಬಂಟ್ವಾಳ. ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರ,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಯೋಜಕರಾದ ಪದ್ಮನಾಭ ಸಾವಂತ್, ಪ್ರಮುಖರಾದ ಅಮ್ಮು ರೈ ಹರ್ಕಾಡಿ, ಮೋಹನ್ ನಾಯಕ್ ಕಕ್ಕಿಬೆಟ್ಟು, ಅಣ್ಣಪ್ಪ ನಾಯಕ್ ವೇಣೂರು, ಇಸ್ಮಾಯಿಲ್ ಕೆ ಪೆರಿಂಜೆ ಮತ್ತು ಇನ್ನಿತರ ಮುಖಂಡರು ಉಪಸ್ಥಿತಿ ಇದ್ದರು.