ಬಂಟ್ವಾಳ: ಬಂಟ್ವಾಳ ತಾಲೂಕು ಕರ್ಪೆ ಗ್ರಾಮದ ತಜಂಗುರಿ ನಿವಾಸಿ ಗಿರೀಶ್ ಪೂಜಾರಿ ಎಂಬವರು ತೋಟದಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕುತ್ತಿಗೆಯ ಎರಡು ಮೂಳೆ ಮುರಿದು, ಕಾಲಿನ ಸ್ವಾದೀನ ಕಳೆದು ಮಂಗಳೂರು ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಳಾಗಿ ಚಿಕಿತ್ಸೆ ವೆಚ್ಚಕ್ಕಾಗಿ ಸಂಕಷ್ಟದಲ್ಲಿರುವ ಕುಟುಂಬದ ನೋವಿನ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಬಂದ ವಿಚಾರ ಮನಗಂಡ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಉಳಿಪಾಡಿ ಸಂಬಂಧಪಟ್ಟ ಆಸ್ಪತ್ರೆಯ ಆಡಳಿತ ಮತ್ತು ಸರಕಾರಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಮಾಡಿ ಗಿರೀಶ್ ಪೂಜಾರಿ ಯವರ ಆಸ್ಪತ್ರೆ ಬಿಲ್ಲು ಸಂಪೂರ್ಣ ರಿಯಾಯಿತಿ ಮಾಡುವ ಮೂಲಕ ಬಡವರ ಕಾಳಜಿಯ ಜನನಾಯಕ ಎನಿಸಿಕೊಂಡಿದ್ದಾರೆ.
ಕುಟುಂಬದ ಸಂಕಷ್ಟಕ್ಕೆ ಸಕಾಲದಲ್ಲಿ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್, ರವರಿಗೆ ಕರ್ಪೆ ಗ್ರಾಮಸ್ಥರ ಪರವಾಗಿ ಸ್ಥಳೀಯ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಕೃತಜ್ಞತೆ ಸಲ್ಲಿಸಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.