ಬಂಟ್ವಾಳ: ಬಂಟ್ವಾಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ವತಿಯಿಂದ ಸಾದಾರಣ ಕಡಿಮೆ ತೂಕ ಇರುವ ಹಾಗೂ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಮನೆಗೆ ಬೇಟಿ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೊರೊನಾ ಸಂಕಷ್ಟದ ಲಾಕ್ ಡೌನ್ ಅವಧಿಯಲ್ಲಿ ಸಿ.ಡಿ.ಪಿ.ಒ ಇಲಾಖೆಯ ಅಂಗನವಾಡಿ ಕೇಂದ್ರಗಳು ಸರಕಾರಿ ಆದೇಶದಂತೆ ಸಂಪೂರ್ಣ ಬಂದ್ ಆಗಿದ್ದು ಅಂಗನವಾಡಿಗೆ ಬರುವ ಮಕ್ಕಳು ಮನೆಯಲ್ಲಿರುವ ಪ್ರಸ್ತುತ ದ ದಿನಗಳಲ್ಲಿ ಅವರ ತೂಕದ ಬಗ್ಗೆ ಮಾಹಿತಿ ಪಡೆಯುವ ಹಾಗೂ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯವಿಚಾರಣೆ ಜೊತೆಗೆ ಮಾಹಿತಿ ನೀಡುವ ಉದ್ದೇಶದಿಂದ ಐ.ಸಿ.ಡಿ.ಎಸ್.ತಂಡ ಮನೆಮನೆಗೆ ಬೇಟಿ ನೀಡುತ್ತಿದೆ.
ಬಂಟ್ವಾಳ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದ ಮನೆಗಳಿಗೆ ಬೇಟಿ ನೀಡಿ ಅಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಕೆಲಸ ಇಲಾಖೆಯ ವತಿಯಿಂದ ನಡೆಯುತ್ತಿದ್ದು ಗುರುವಾರ ಬೆಳಿಗ್ಗೆ ನರಿಕೊಂಬು ಗ್ರಾಮದ ನಿನ್ನಿಪಡ್ಪು ಅಸುಪಾಸಿನ ಮನೆಗಳಿಗೆ ಬಂಟ್ವಾಳ ಸಿಡಿಪಿಒ ಗಾಯತ್ರಿ ಕಂಬಳಿ ಬೇಟಿ ನೀಡಿದ್ದಾರೆ.
ಹಾಗೂ ಅವರ ನೇತ್ರತ್ವದ ಸಿಬ್ಬಂದಿ ಗಳ ತಂಡ ಬೇರೆ ಬೇರೆ ಗ್ರಾಮದಲ್ಲಿ ಮನೆಮನೆ ಬೇಟಿ ಮಾಡಿ ಅಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡುವ ಕೆಲಸಗಳು ನಡೆಯುತ್ತಿವೆ.
ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಅವರ ನೇತ್ರತ್ವದಲ್ಲಿ ಇಲಾಖೆಯ ಸಿಬ್ಬಂದಿಗಳು ಇಲಾಖೆಯ ಕಾರ್ಯದ ಜೊತೆ ಜೊತೆಯಲ್ಲಿ
ಕೊರೊನಾ ಸೊಂಕು ನಿಯಂತ್ರಣದ ಕಾರ್ಯ ದಲ್ಲೂ ಮುಂಚೂಣಿಯಲ್ಲಿ ನಿಂತು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.