ಬಂಟ್ವಾಳ : ಕಾಡುಕೋಣಗಳ ಗುಂಪೊಂದು ಕಾಡಿನಿಂದ ನಾಡಿಗೆ ಇಳಿದಿದ್ದು ಕೃಷಿಕರ ಕೃಷಿಗೆ ಕೊಲ್ಲಿ ಇಟ್ಟಿದೆ.
ವೀರಕಂಬ ಗ್ರಾಮದ ಕೆಲಿಂಜ ಸಮೀಪದ ಕಲ್ಮಲೆ ಸುತ್ತಮುತ್ತಲಿನ ಕೃಷಿಕರು ಕಾಡುಕೋಣಗಳ ರಾತ್ರಿ ಉಪಟಳ ಮಾಡಿದ್ದು, ಅಡಿಕೆ ಸಸಿಗಳ ಬುಡಸಮೇತ ಅಗೆದು ಹಾಕಿದೆ.
ಕಲ್ಮಲೆ ನಿವಾಸಿ ವಿಠಲ ರೈಯವರ ಅಡಿಕೆ ತೋಟಕ್ಕೆ ಕಳೆದ ಐದಾರು ದಿನಗಳಲ್ಲಿ ದಾಳಿಯಿಟ್ಟ ಕಾಡುಕೋಣಗಳ ಗುಂಪು 300ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮತ್ತು ತೆಂಗಿನ ಗಿಡಗಳನ್ನು ನುಚ್ಚುನೂರಾಗಿಸಿವೆ. ವರ್ಷದ ಹಿಂದೆ ಇದೇ ರೀತಿ ದಾಳಿಯುಟ್ಟಿದ್ದ ಕಾಡುಕೋಣಗಳು 200ಕ್ಕೂ ಹೆಚ್ಚು ಆಡಿಕೆ, ತೆಂಗು ನಾಶಪಡಿಸಿದ್ದುವೆಂದು ಮಾಲಿಕರು ಅಲವತ್ತುಕೊಂಡಿದ್ದಾರೆ. ಇದೀಗ ಮತ್ತೆ ಕಾಡುಕೋಣಗಳ ಹಾವಳಿ ಮಿತಿಮೀರಿದ್ದು ಒಂದೆಡೆ ಕೊರೊನಾ ಸಂಕಷ್ಟವಾದರೆ ಮತ್ತೊಂದೆಡೆ ಕಾಡುಕೋಣಗಳ ಹಾವಳಿಯಿಂದ ಕೃಷಿಕರು ಹೈರಾಣವಾಗಿದ್ದು ಸಂಬಂಧಿಸಿದ ಇಲಾಖೆಯವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ದ್ದಾರೆ.