ಬಂಟ್ವಾಳ: ಬಂಟ್ವಾಳ ಜಿಎಸ್‌ಬಿ ಯುವಕರ ವತಿಯಿಂದ ಕೈಕಂಬದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಫಾಗಿಂಗ್ ಯಂತ್ರವನ್ನು ನೀಡಲಾಯಿತು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಶ್ವಿನಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ, ಸದಾಶಿವ ಪ್ರಭು, ಅವಿನಾಶ್ ಕಾಮತ್, ವೆಂಕಟರಮಣ ಆಚಾರ್ಯ, ಗುರುಪ್ರಸಾದ್ ಶೆಣೈ, ಕಾರ್ತಿಕೇಯ ಪೈ ಮೊದಲಾದವರು ಉಪಸ್ಥಿತರಿದ್ದರು.