ಬಂಟ್ವಾಳ: ಸೋಮವಾರ ರಾತ್ರಿ ಸುರಿದ ವರುಣನ ಆರ್ಭಟಕ್ಕೆ ಬಂಟ್ವಾಳ ತಾಲೂಕಿನ ಹಲವೆಡೆ ಮನೆಗಳಿಗೆ ಹಾಗೂ ಕೃಷಿಗೆ ಹಾನಿಯಾಗದ ಬಗ್ಗೆ ವರದಿಯಾಗಿದೆ.
ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಶಂಭೂರು ನಿವಾಸಿ ರಾಧ ಅವರ ವಾಸ್ತವ್ಯದ ಮನೆಗೆ ಸೋಮವಾರ ಸುರಿದ ಮಳೆಗೆ ಹಾನಿಯಾಗಿದೆ.
ಪಂಜಿಕಲ್ಲು ಗ್ರಾಮದ ಪಾಂಗಳ ನಿವಾಸಿ ಅಣ್ಣು ಪೂಜಾರಿ ಅವರ ಫಸಲು ನೀಡುವ 20 ಅಡಿಕೆ ಗಿಡಗಳು ಗಾಳಿ ಮಳೆಗೆ ತುಂಡಾಗಿ ಬಿದ್ದಿವೆ.
ಅಮ್ಟಾಡಿ ಗ್ರಾಮದ ಲೋಕನಾಥ ಅವರ ಮನೆಗೆ ತಾಗಿಕೊಂಡಿರುವ ದನದ ಹಟ್ಟಿಗೆ ಹಾನಿಯಾಗಿದೆ.
ಮಂಚಿ ಗ್ರಾಮದ ಕಡಂಗಡಿ ಭಗೀರಥಿ ಅವರ ಮನೆಯ ಹಿಂಬದಿ ಬದಿಯ ಗೋಡೆ ಸಂಪೂರ್ಣ ಜರಿದು ಬಿದ್ದ ಬಗ್ಗೆ ತಾಲೂಕು ಆಡಳಿತ ಅಧಿಕೃತ ಮಾಹಿತಿ ನೀಡಿದೆ.
ಘಟನಾ ಸ್ಥಳಕ್ಕೆ ಅಯಾಯ ಗ್ರಾಮದ ಅಧಿಕಾರಿಗಳು ಬೇಟಿನೀಡಿ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ