ಕೊರೋನಾ ಮಹಾಮಾರಿಯ ಈ ಸಂಕಷ್ಟ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಮಾಜದ ಜನರ ಪ್ರಾಣ ರಕ್ಷಣೆಗೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ನಿಜವಾಗಿಯೂ ಅಭಿನಂದನಾರ್ಹರು ಎಂದು ಇಂದು ಗೋಳ್ತಮಜಲು ಗಣೇಶ ಮಂದಿರದಲ್ಲಿ ನಡೆದ ಗೋಳ್ತಮಜಲು ಅಮ್ಟೂರು ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ಮಾಡಿದ ಸಂದರ್ಭದಲ್ಲಿ ಡಾಕ್ಟರ್ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿದರು.
ಕಾರ್ಯಕರ್ತೆಯರಿಗೆ ನೀಡುವ ಗೌರವಧನವನ್ನು ಕಾರ್ಕಳ ಭುವನೇಂದ್ರ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಕೃಷ್ಣಪ್ಪ ಪೂಜಾರಿ ಹೊಸಮನೆ,ಗಿರಿಜಾ ಕೃಷ್ಣಪ್ಪ ಪೂಜಾರಿ ಮತ್ತು ನಿತಿನ್ ಕೆ ನೀಡಿ ಸಹಕರಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್ ನೆಟ್ಲ ಉಪಾಧ್ಯಕ್ಷರಾದ ಲಕ್ಷ್ಮೀ ವಿ ಪ್ರಭು ಗಣೇಶ ಮಂದಿರದ ಗೌರವ ಅಧ್ಯಕ್ಷರಾದ ಶ್ಯಾಮ್ ಭಟ್ ತೋಟ, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ್ ಟೈಲರ್, ಮುರಳೀಕೃಷ್ಣ ಭಟ್, ಪುರುಷೋತ್ತಮ್ ಡಿ. ನಳಿನಿ ಹೊಸೈಮರ್, ಸರೋಜಿನಿ ಸುಂದರ ಶೆಟ್ಟಿ ಗೋಪಾಲಕೃಷ್ಣ ಪೂವಳ , ದೈಹಿಕ ಶಿಕ್ಷಕರಾದ ಪುರುಷೋತ್ತಮ , ವಿಘ್ನೇಶ್ ಆಚಾರ್ಯ,ಸುಂದರ ಪೂಜಾರಿ , ಮತ್ತಿತರರು ಉಪಸ್ಥಿತರಿದ್ದರು ಮಂದಿರದ ಕೋಶಾಧಿಕಾರಿಯಾದ ಮೋನಪ್ಪ ದೇವಸ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.