ಬಂಟ್ವಾಳ: ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಅನಾವಶ್ಯಕವಾಗಿ ತಿರುಗಾಟ ನಡೆಸುವ ಹಾಗೂ ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡದ ಸವಾರರಿಗೆ ದಂಡದ ಬಿಸಿ ಮುಟ್ಟಿಸಿ ಎಚ್ಚರಿಕೆ ನೀಡಿದ ಮೆಲ್ಕಾರ್ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.
ಕೊರೊನಾ ನಿಯಂತ್ರಣಕ್ಕೆ ಸರಕಾರ ಲಾಕ್ ಡೌನ್ ಮಾಡಿದ್ದು ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಅಗತ್ಯ ಸಾಮಾಗ್ರಿಗಳಿಗೆ ಪೇಟೆ ಗೆ ಬರಬಹುದು ಎಂಬ ನಿಯಮಗಳನ್ನು ಮೀರಿ ದಿನವಿಡೀ ಅನಗತ್ಯ ವಾಗಿ ಬೈಕ್ ಗಳಲ್ಲಿ ಹೆಲ್ಮೆಟ್ , ಮಾಸ್ಕ್ ರಹಿತ ವಾಗಿ, ತ್ರಿಬಲ್ ರೈಡ್ ಹಾಗೂ ಇತರೆ ವಾಹನಗಳಲ್ಲಿ ತಿರುಗಾಟ ನಡೆಸುತ್ತಿದ್ದ ಸವಾರರನ್ನು ಟ್ರಾಫಿಕ್ ಎಸ್.ಐ. ರಾಜೇಶ್ ಕೆ.ವಿ ಅವರು ತಪಾಸಣೆ ಮಾಡಿ ದಂಡ ವಿಧಿಸಿ ಬಳಿಕ ಬುದ್ದಿ ವಾದ ಹೇಳಿ ಕಳುಹಿಸಿದ ಘಟನೆಗಳು ನಡೆದಿದೆ.
ಜೊತೆಗೆ ದಾಖಲೆ ಗಳು ಇಲ್ಲದ ಹಾಗೂ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಕಾರಣ ಕ್ಕೆ ವಾಹನಗಳ ವಶಪಡಿಸಿಕೊಂಡ ಘಟನೆ ನಡೆದಿದೆ.