ಬಂಟ್ವಾಳ: ಹಿರಿಯ ಆರೆಸ್ಸೆಸ್ ಕಾರ್ಯಕರ್ತ, ಬಡಗಕಜೆಕಾರು ಗ್ರಾಮದ ಕಿಜನಾರು ನಿವಾಸಿ ಡೊಂಬಯ್ಯ ಪೂಜಾರಿ (85)ಅಸೌಖ್ಯದಿಂದ ಜೂ.18 ರಂದು ಸ್ವ ಗೃಹದಲ್ಲಿ ನಿಧನ ಹೊಂದಿದರು.
ಮೃತರು ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರು ಪ್ರಗತಿಪರ ಕೃಷಿಕರಾಗಿದ್ದು, ಕಜೆಕಾರು ಸಹಕಾರಿ ವ್ಯಾವಸಾಯಿಕ ಸಂಘ, ಪಾಂಡವರಕಲ್ಲು ಇದರ ಮಾಜಿ ನಿರ್ದೇಶಕ ರಾಗಿದ್ದರು. ಕಿಜನಾರು ಶ್ರೀ ಗೀತಾ ಭಜನಾ ಮಂದಿರದ ಅಧ್ಯಕ್ಷರಾಗಿದ್ದರು.ವಿವಿಧ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.