Sunday, April 7, 2024

ದ.ಕ.ಜಿಲ್ಲೆಯಲ್ಲಿ ಜೂನ್ 21ರ ಸೋಮವಾರದಿಂದ ಅನ್ ಲಾಕ್ ಗೆ ಚಿಂತನೆ ನಡೆಸಿದ ಜಿಲ್ಲಾಡಳಿತ

ದ.ಕ ಜಿಲ್ಲೆಯಲ್ಲಿ ಸೋಮವಾರದಿಂದ ಹಂತಹಂತವಾಗಿ ಲಾಕ್ ಡೌನ್ ಸಡಿಲಿಕೆಗೆ ಜಿಲ್ಲಾಡಳಿತ ಚಿಂತನೆ? ನಡೆಸಿದ್ದು , ರಾಜ್ಯ ಸರ್ಕಾರ ಅನುಮತಿ ಕೊಟ್ಟರೆ ಜಿಲ್ಲೆಯಲ್ಲಿ ಸೋಮವಾರದಿಂದ ಅನ್ ಲಾಕ್ ಅಗುತ್ತದೆ ಎನ್ನಲಾಗಿದೆ.

ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಗಮನಕ್ಕೆ ತರಲು ಚಿಂತನೆ ನಡೆಸಿದೆ.

ಮುಖ್ಯಮಂತ್ರಿ ಗಳು ಲಾಕ್ ಡೌನ್ ಸಡಿಲಿಕೆಗೆ ಅವಕಾಶ ಕೊಟ್ಟರೆ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ

ಜಿಲ್ಲಾಡಳಿತ ಪಟ್ಟಿ ಮಾಡಿ ತಯಾರಿ ನಡೆಸಿದೆ.

ಅಗತ್ಯ ವಸ್ತುಗಳ ಜೊತೆಗೆ ಇತರೆ ಅಂಗಡಿ, ಶಾಪ್ ತೆರೆಯಲು ಅನುಮತಿ ನೀಡುವ ಸಾಧ್ಯತೆಗಳು ಇವೆ.

ವಾರದಲ್ಲಿ ಮೂರು ದಿನ ಅಗತ್ಯ ವಸ್ತು, ಉಳಿದ ನಾಲ್ಕು ದಿನ ಇತರೆ ಅಂಗಡಿ ತೆರೆಯಲು ಅನುಮತಿ? ನೀಡುವ ಸಾಧ್ಯತೆ ಗಳು ಅತೀ ಹೆಚ್ಚು ಇವೆ.

ಒಂದು ದಿನ ಅಗತ್ಯ ವಸ್ತುವಿಗಷ್ಟೇ ಅನುಮತಿ, ಇನ್ನೊಂದು ದಿನ ಇತರೆ ಶಾಪ್ ಗಳಿಗೆ ಅನುಮತಿ ನೀಡುವ ಬಗ್ಗೆ ಪೂರ್ವ ತಯಾರಿ ನಡೆಸಲಾಗಿದೆ ಎನ್ನಲಾಗಿದೆ‌.

ಇಷ್ಟು ದಿನ ಮುಚ್ಚಿದ್ದ ವ್ಯವಹಾರದ ನಷ್ಟ ತಪ್ಪಿಸಲು ಜಿಲ್ಲಾಡಳಿತ ಅಂಗಡಿಗಳ ತೆರೆಯಲು ಅನುಮತಿಯನ್ನು ಚಿಂತನೆ ನಡೆಸಿದೆ.

ಮಧ್ಯಾಹ್ನದವರೆಗಷ್ಟೇ ವ್ಯವಹಾರ ನಡೆಸಲು ಅನುಮತಿ ನೀಡುವ ಸಾಧ್ಯತೆ ಹೆಚ್ಚು ಇವೆ.

ಲಾಕ್ ಸಡಿಲಿಕೆಗೊಂಡರು ಸದ್ಯ ಸಭೆ, ಸಮಾರಂಭ ನಿಷೇಧ, ಥಿಯೇಟರ್ ಮತ್ತು ಮಾಲ್ ಗಳು ಬಂದ್ ಆಗಲಿವೆ. ಕೊರೊನಾ ಸೊಂಕು ಸಂಖ್ಯೆ ಇಳಿಮುಖವಾಗುವವರೆಗೆ ಕೆಲವು ನಿಯಮ ಗಳನ್ನು ಕಠಿಣ ವಾಗಿ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.

ಲಾಕ್ ಸಡಿಲಿಕೆ ವೇಳೆ ಬಸ್ ಸಂಚಾರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದ ಜಿಲ್ಲಾಡಳಿತ,

ಬಸ್ ಸಂಚಾರಕ್ಕೆ ಅನುಮತಿ ಕೊಡುವುದು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ನಿನ್ನೆ 10% ಕೊರೋನಾ ಪಾಸಿಟಿವಿಟಿ ರೇಟ್ ಹೊಂದಿದ್ದ ದ.ಕ ಜಿಲ್ಲೆಯಲ್ಲಿ

ನಿನ್ನೆ ಒಂದೇ ದಿನ 11 ಸಾವಿರಕ್ಕೂ ಅಧಿಕ ಟೆಸ್ಟಿಂಗ್ ಆರೋಗ್ಯ ಇಲಾಖೆ ಮಾಡಿದೆ.

ಹೊರ ಜಿಲ್ಲೆಯ ರೋಗಿಗಳು ಕೂಡ ಮಂಗಳೂರಿನ ಆಸ್ಪತ್ರೆಗಳಲ್ಲೇ ದಾಖಲಾಗಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...