ಬಂಟ್ವಾಳ: ಹಿರಿಯ ಯಕ್ಷಗಾನ ಅರ್ಥಧಾರಿ, ಕಾವಳಮೂಡೂರು ಗ್ರಾಮದ ಮರಮ್ಮ ನಿವಾಸಿ ಮಹಾಬಲ ಶೆಟ್ಟಿ (80) ಅವರು ಅಸೌಖ್ಯದಿಂದ ಜೂ.10ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರ ಸಹಿತ ಐವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಪ್ರಗತಿಪರ ಕೃಷಿಕರಾಗಿದ್ದ ಅವರು ಜಾನುವಾರುಗಳಿಗೆ ನಾಟಿ ವೈದ್ಯ ಪದ್ಧತಿಯಲ್ಲಿ ಔಷಧಿ ನೀಡುತ್ತಿದ್ದರು.