ಬಂಟ್ವಾಳ: ಕಡೇಶಿವಾಲಯ ಗ್ರಾಮದ ಖಂಡಿಗ ನಿವಾಸಿ ಹಿರಿಯ ತೆಂಕುತಿಟ್ಟು ಯಕ್ಷಗಾನ ಭಾಗವತ ರಮೇಶ್ ಆಚಾರ್ಯ (79) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜೂನ್ 4 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಮೂವರು ಪುತ್ರ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ದಿ.ಕೆ.ಸುಬ್ರಾಯ ಆಚಾರ್ಯ ಸತ್ಯಮ್ಮ ದಂಪತಿಗಳ ಪುತ್ರರಾಗಿ 8 ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ ಅವರು ಯಕ್ಷಗಾನ ಕ್ಷೇತ್ರದ ಕಡೆ ಗೆ ಆಕರ್ಷಿತರಾದರು.
ಗುರು ದಿ! ಇರಾ ಗೋಪಾಲಕೃಷ್ಣ ಭಾಗವತರಲ್ಲಿ ಯಕ್ಷಗಾನದ ಕಲಾಪ್ರಕಾರಗಳನ್ನು ಅಭ್ಯಾಸ ಮಾಡಿದರು.
ಇವರು ಕಟೀಲು , ಮುಚ್ಚೂರು, ಸುಂಕದಕಟ್ಟೆ, ಧರ್ಮಸ್ಥಳ, ಪೊಳಲಿ ರಾಜರಾಜೇಶ್ವರಿ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಬಳಿಕ ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಕೃಷಿಕರಾಗಿ ಗುರುತಿಸಿ ಕೊಂಡಿದ್ದರು